ಡೈಲಿ ವಾರ್ತೆ:12 ಆಗಸ್ಟ್ 2023

ಖಾಲಿ ಹೊಟ್ಟೆಯಲ್ಲಿ ಹಾಲು ಸೇವನೆ ಒಳ್ಳೆಯದೇ.?

ಅರೋಗ್ಯ: ಕೆಲ ಜನರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಹಾಲು ಆರೋಗ್ಯಕ್ಕೆ ಒಳ್ಳೆಯದು. ಆದರೆ ಖಾಲಿ ಹೊಟ್ಟೆಗೆ ಹಾಲು ಕುಡಿಯುವುದು ಒಳ್ಳೆಯದಲ್ಲ. ತಜ್ಞರ ಪ್ರಕಾರ, ಖಾಲಿ ಹೊಟ್ಟೆಗೆ ಹಾಲು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ . ಹಾಲಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶಗಳಿರುತ್ತವೆ. ಹಾಲು ಸಂಪೂರ್ಣ ಆಹಾರವಿದ್ದಂತೆ.
ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಆಭ್ಯಾಸ ಇಡೀ ದಿನದ ಮೇಲೆ ಪರಿಣಾಮ ಬೀರಬಹುದು.

ಖಾಲಿ ಹೊಟ್ಟೆಗೆ ಹಾಲು ಸೇವಿಸುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು :
1) ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿರಲಾರದು. ಇದು ನಿಮ್ಮ ದೇಹದ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ನೀವು ವಾಯುವಿನ ಪ್ರಾಬಲ್ಯ (ವಾತ) ಹೊಂದಿದ್ದರೆ ಅಥವಾ ಕಫದ ಪ್ರಾಬಲ್ಯ (ನೀರು) ಹೊಂದಿದ್ದರೆ, ಖಾಲಿ ಹೊಟ್ಟೆಯಲ್ಲಿ ಎಂದಿಗೂ ಹಾಲು ಕುಡಿಯಬಾರದು. ಕೆಮ್ಮು ಮತ್ತು ಜ್ವರಕ್ಕೆ ತುತ್ತಾದವರು ಬೆಳಿಗ್ಗೆ ಹಾಲು ಸೇವಿಸಬಾರದು.

2) ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಹಾಲು ಕುಡಿಯುತ್ತೇವೆ ಎಂಬುದು ಸಹ ಬಹಳ ಮುಖ್ಯವಾಗುತ್ತದೆ.
ಕೆಲವೊಂದು ಸಮಯ ಹಾಲು ಕುಡಿಯಲು ಒಳ್ಳೆಯದಲ್ಲ. ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ.

3) ಅನೇಕ ಜನರು ಬೆಳಗ್ಗೆ ಹಾಲು ಕುಡಿಯುತ್ತಾರೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಅನೇಕ ತಜ್ಞರು ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಆಯುರ್ವೇದದ ಪ್ರಕಾರ. ಬೆಳಗ್ಗೆ ಹಾಲು ಕುಡಿಯುವುದನ್ನು ಖಂಡಿತ ಬಿಡಬೇಕು.

4) ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು.

5) ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಹೊಟ್ಟೆ ಸೆಳೆತ ಮತ್ತು ವಾಂತಿಗೆ ಕಾರಣವಾಗಬಹುದು.

ಹಾಲು ಕುಡಿಯುವ ಸಮಯ: ಆಯುರ್ವೇದವು ಬೆಳಿಗ್ಗೆಗಿಂತ ಸಂಜೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತದೆ. ಏಕೆಂದರೆ ರಾತ್ರಿ ದೇಹವನ್ನು ಪುನರುಜ್ಜಿವನಗೊಳಿಸುವ ಶಕ್ತಿ ಹಾಲಿಗೆ ಇದೆ.

ಬೆಳಗ್ಗೆ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗಬಹುದು. ಆದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ರಾತ್ರಿಯ ನಿದ್ದೆ ಚೆನ್ನಾಗಿ ಬರುತ್ತದೆ. ರಾತ್ರಿಯಲ್ಲಿ ನರಗಳನ್ನು ವಿಶ್ರಾಂತಿ ಮಾಡಲು ಹಾಲು ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.