ಡೈಲಿ ವಾರ್ತೆ:12 ಆಗಸ್ಟ್ 2023
ಮೊಡಂಕಾಪು : ಕಾರ್ಮೆಲ್ ಕಾಲೇಜು ಪದವಿ ತರಗತಿಗಳ ಪ್ರಾರಂಭೋತ್ಸವ, ಉದ್ಘಾಟನೆ
ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಕಾಲೇಜು, ಪದವಿ ತರಗತಿಗಳ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭವು ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರೊ. ಹೆಚ್.ಎಸ್ ಫೆರ್ನಾಂಡಿಸ್ ಮಾತನಾಡಿ ವಿದ್ಯಾರ್ಥಿಗಳು, ಹೆತ್ತವರು, ಆಡಳಿತ ಮಂಡಳಿ ಪರಸ್ಪರ ಅರಿತು ಹೊಂದಾಣಿಕೆ ಯಿಂದ ಶ್ರಮಿಸಿದರೆ ಯಶಸ್ಸು ಸಾಧ್ಯ, ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಹಾಗೂ ಶಿಸ್ತು ಬಹಳ ಮುಖ್ಯ ಎಂದರು .
ಕಾರ್ಮೆಲ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ವಂದನೀಯ ಭಗಿನಿ ರೊಸಿಲ್ಡ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲೆ ವಂದನೀಯ ಭಗಿನಿ ಲತಾ ಫೆರ್ನಾಂಡಿಸ್ ಎ. ಸಿ, ಅವರು ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿನಿ ಕುಮಾರಿ ತೇಜಸ್ವಿ ಕಾರ್ಮೆಲ್ ಸಂಸ್ಥೆಯಲ್ಲಿ ಕಳೆದ ತಮ್ಮ ಮೂರು ವರ್ಷಗಳ ವಿದ್ಯಾರ್ಥಿ ಜೀವನದ ನೆನಪನ್ನು ಮೆಲುಕು ಹಾಕುತ್ತಾ, ನಾವು ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಾಣಿಜ್ಯ ಉಪನ್ಯಾಸಕರಾದ ಕುಮಾರಿ ವಿಜೇತ ಸ್ವಾಗತಿಸಿ, ಕುಮಾರಿ ನಿಹಾರಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕುಮಾರಿ ಅಲ್ವಿಶಾ ವಂದಿಸಿದರು.