ಡೈಲಿ ವಾರ್ತೆ:12 ಆಗಸ್ಟ್ 2023
ಗುಜ್ಜಾಡಿ ಗ್ರಾಮ ಪಂಚಾಯತ್ ಉಪಾದ್ಯಕ್ಷನಿಂದ ಕಳ್ಳತನ: ಅರಣ್ಯ ಕಛೇರಿಯಲ್ಲಿ ಕೇಸು ದಾಖಲು
ಕುಂದಾಪುರ: ಕುಂದಾಪುರ ತಾಲೂಕು ಹೊಸಾಡು ಗ್ರಾಮದ SLRM ಘಟಹದ ಸಮೀಪ ಸರಕಾರಿ ಸ್ಥಳದಲ್ಲಿ ಇದ್ದ ಮರಗಳನ್ನು, ಗುಜ್ಜಾಡಿ ಪಂಚಾಯತ್ ಉಪಾಧ್ಯಕ್ಷರಾದ ರಾಜು ಪೂಜಾರಿ ಇವರು, ಕಡಿಸಿ ಕದ್ದುಕೊಂಡು ಹೋದ ಬಗ್ಗೆ, ಗಂಗೊಳ್ಳಿ ಗಸ್ತು ಅರಣ್ಯ ಪಾಲಕರಾದ ಆನಂದ ಬಳೆಗಾರ ಇವರು, ಕುಂದಾಪುರ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ , 1963 ನೇ ಕರ್ನಾಟಕ ಅರಣ್ಯ ನಿಯಮ ಕಲಂ. 33 (2) 5 ಮತ್ತು CRPC section 379 ರಂತೆ ಆ. 10 ರಂದು ಪ್ರಕರಣ ದಾಖಲಿಸಿರುತ್ತಾರೆ.
ಆರೋಪಿ ರಾಜು ಪೂಜಾರಿ ತಲೆ ಮರೆಸಿಕೊಂಡಿದ್ದು ಆರೋಪಿಯ ಪತ್ತೆಗೆ ಖಾಕಿ ಪಡೆ ಕಾರ್ಯಾಚರಣೆಯಲ್ಲಿದೆ.
ಸದ್ರಿ ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕರಾದ ರಾಘವೇಂದ್ರ ಮಂಜುನಾಥ ಗಾಣಿಗ ಪಾಲ್ಗೊಂಡಿದ್ದರು.