ಡೈಲಿ ವಾರ್ತೆ:13 ಆಗಸ್ಟ್ 2023

ಕಾರ್ಕಳ: ರಸ್ತೆ ಬದಿಯ ಕೆಸರಿನಲ್ಲಿ ಹೂತುಹೋಗಿದ್ದ ದನವನ್ನು ರಕ್ಷಿಸಿದ ಬೈಕ್ ಸವಾರರು (ವಿಡಿಯೋ ವೈರಲ್)

ಕಾರ್ಕಳ: ಕಾರ್ಕಳದಿಂದ ಅಮಾಸೆಬೈಲಿನ ಕಡೆಗೆ ಹೊರಟಿದ್ದ ಬೈಕ್ ಸವಾರರಿಗೆ ರಸ್ತೆ ಬದಿಯಲ್ಲಿ ಕೆಸರಿನಲ್ಲಿ ಹೂತುಹೋಗಿದ್ದ ದನ ಕಂಡಿದ್ದು, ತಕ್ಷಣ ಬೈಕ್ ನಿಲ್ಲಿಸಿದ ಸವಾರರು ದನವನ್ನು ರಕ್ಷಿಸಿರುವ ಘಟನೆ ನಡೆದಿದೆ.

ವಿಡಿಯೋ ವೀಕ್ಷಿಸಿ

ದನ ರಕ್ಷಣೆ ಮಾಡಿದ ಬೈಕ್ ಸವಾರರು ರಕ್ಷಿಸುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋವನ್ನು ಎಂಟು ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಬೈಕರ್ ಆ್ಯನಿ ಅರುಣ್ ದಂಪತಿ ಮತ್ತು ಸಾಯಿಕಿರಣ್ ಶೆಟ್ಟಿ ಎನ್ನುವವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕೆಸರಿನಲ್ಲಿ ಹೂತುಹೋಗಿದ್ದ ದನವನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ.

ಇನ್ನು ಅಮವಾಸೆಬೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕೆಸರಿನಲ್ಲಿ ಹೂತುಹೋಗಿದ್ದ ದನವನ್ನು ಕಂಡು ಸಹಾಯ ಮಾಡಿದ್ದೇವೆ. ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ನಮಗೆ ಕೈಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆ್ಯನಿ ಅರುಣ್ ಅವರು ಪೋಸ್ಟ್ ಮಾಡಿದ್ದಾರೆ.

ಮುಗ್ಧ ಪ್ರಾಣಿಗೆ ಮಾಡಿದ ಸಹಾಯಕ್ಕಾಗಿ ಹಲವಾರು ಜನರು ಬೈಕ್ ಸವಾರರನ್ನು ಶ್ಲಾಘಿಸಿದ್ದಾರೆ.