ಡೈಲಿ ವಾರ್ತೆ:13 ಆಗಸ್ಟ್ 2023

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಹಲವು ಮನೆಗೆ NIA ದಾಳಿ!

ಬಂಟ್ವಾಳ : ಎನ್.ಐ.ಎ. ಪೋಲೀಸರು ಬಂಟ್ವಾಳದ ಎರಡು ಮನೆ ಸಹಿತ ದ.ಕ.ಜಿಲ್ಲೆಯಲ್ಲಿ ಒಟ್ಟು 5 ಮಂದಿಯ ಮನೆಗಳಿಗೆ ಭಾನುವಾರ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ತಾಲೂಕಿನ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಹಾಗೂ ಕುಂಪಣಮಜಲು ನಿವಾಸಿಯಾಗಿದ್ದ ಪ್ರಸ್ತುತ ವಳಚ್ಚಿಲ್ ನಿವಾಸಿಯಾಗಿರುವ ಮುಸ್ತಾಕ್ ಎಂಬವರ ಮನೆಗೆ ದಾಳಿ ನಡೆಸಿದ ಎನ್.ಐ.ಎ ಪೋಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.