ಡೈಲಿ ವಾರ್ತೆ:14 ಆಗಸ್ಟ್ 2023

ಬಾದಾಮಿ ಸೇವನೆಯಿಂದ 10 ಆರೋಗ್ಯಕಾರಿ ಪ್ರಯೋಜನಗಳು.! ಇಲ್ಲಿದೆ ಮಾಹಿತಿ

ಅರೋಗ್ಯ: ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಒಂದಲ್ಲ ಒಂದು ಚಟುವಟಿಕೆಯನ್ನು ಮಾಡುತ್ತಲೇ ಇರುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಡ್ರೈಪ್ರೋಟ್ಸ್ ತಿನ್ನುವುದು, ಊಟದ ಬಳಿಕ ಹಣ್ಣುಗಳನ್ನು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅರೋಗ್ಯಕ್ಕೆ ಉತ್ತಮ ಸಹಾಯ ಮಾಡುತ್ತದೆ.

ಅಂತೆಯೇ ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಹಲವು ಪ್ರಯೋಜನೆಗಳನ್ನು ಪಡೆಯಬಹುದು.

1) 10-15 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಉಪಾಹಾರಕ್ಕೆ ಮೊದಲು ತಿನ್ನಬಹುದು. ಇದನ್ನು ಪ್ರತಿದಿನ ಸೇವಿಸಿದರೆ ಪ್ರೋಟೀನ್, ಫೈಬರ್, ಜೀವಸತ್ವಗಳು, ಖನಿಜಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಪಡೆಯಬಹುದು.
2) ಪ್ರತಿದಿನ 6-7 ನೆನೆಸಿದ ಬಾದಾಮಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
3) ಪ್ರತಿದಿನ 5 ಬಾದಾಮಿ ತಿಂದರೆ ರಕ್ತದಲ್ಲಿರುವ ಕೆಟ್ಟ ಕೊಬ್ಬು ಕರಗುತ್ತದೆ.
4) ನೆನೆಸಿದ ಬಾದಾಮಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಆಲ್ಫಾ ಟ್ಯಾಕೋಫೆರಾಲ್ ಅನ್ನು ಹೆಚ್ಚಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
5) ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಅದರ ಮೇಲಿನ ಸಿಪ್ಪೆ ತೆಗೆದು ನಂತರ ತಿನ್ನುವುದು ಉತ್ತಮವಾಗಿದೆ.
6) ಬಾದಾಮಿ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತದ ಹರಿವು ಹೆಚ್ಚುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿ ಹೊಳೆಯುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿದರೆ ಕಾಂತಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
7) ಅಲ್ಲದೆ ಋತುಬಂಧಕ್ಕೊಳಗಾದ ಮಹಿಳೆಯರು ಪ್ರತಿನಿತ್ಯ ಬಾದಾಮಿಯನ್ನು ಸೇವಿಸಿದರೆ ಚರ್ಮದ ಸುಕ್ಕುಗಳಿಂದ ಮುಕ್ತಿ ಪಡೆಯಬಹುದಾಗಿದೆ.
8) ಬಾದಾಮಿಯ ನಿಯಮಿತ ಸೇವನೆಯಿಂದ ಉಸಿರಾಟದ ತೊಂದರೆ, ಹೃದ್ರೋಗ, ಮಧುಮೇಹ, ಚರ್ಮದ ಸಮಸ್ಯೆಗಳು, ಕೂದಲು ಉದುರುವಿಕೆ ಮತ್ತು ರಕ್ತಹೀನತೆಯಂತಹ ಕಾಯಿಲೆಗಳನ್ನು ತಡೆಯಬಹುದು.
9) ರಕ್ತದಲ್ಲಿ ಬಿಳಿ ಮತ್ತು ಕೆಂಪು ಕಣಗಳನ್ನು ಹೆಚ್ಚಿಸುವ ಶಕ್ತಿ ಬಾದಾಮಿಗೆ ಇದೆ.
10) ಮೂಳೆಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.