



ಡೈಲಿ ವಾರ್ತೆ:15 ಆಗಸ್ಟ್ 2023


ವರದಿ: ಅದ್ದಿ ಬೊಳ್ಳೂರು
ಆಪದ್ಬಾಂಧವ ಆಶ್ರಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಪಡುಬಿದ್ರೆ: ಮುದರಂಗಡಿ ಸಮೀಪದ ಮೈಮುನ ಫೌಂಡೇಶನ್ ವತಿಯಿಂದ ಆಪದ್ಬಾಂಧವ ಆಶ್ರಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಪದ್ಬಾಂಧವ ಆಸಿಫ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು ಆಶ್ರಮದ ವಿಶೇಷ ಅತಿಥಿ ಮೂಸಬ್ಬ ಇವರು ಧ್ವಜಾರೋಹಣ ಮಾಡಿದರು, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಕಾರ್ಯಕ್ರಮವನ್ನು ನಿರೂಪಿಸಿ, ಮುನೀರ್ ಮಲ್ಲೂರು ವಂದಿಸಿದರು