ಸಾಸ್ತಾನ: ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಥಳೀಯ ಜನಪ್ರತಿನಿಧಿಗಳಾದ ಸುಧಾಕರ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ನಂತರ ‘ದಿ. ವಿಜಯಣ್ಣನ ಗೆಳೆಯರ ಬಳಗ’ದ ಶಂಕರ್ ಕುಲಾಲ್, ರಾಘುವೇಂದ್ರ ಮಡಿವಾಳ, ನಾಗೇಶ್ ಪೂಜಾರಿ, ಶಂಭು ಮುಂತಾದವರು ಶಾಲೆಗೆ ಅಗತ್ಯ ಕ್ರೀಡಾ ಸಾಮಗ್ರಿಗಳ ಅಲ್ಮೆರಾ ಹಸ್ತಾಂತರ ಮಾಡಿದರು.
ಇಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ಪೂರ್ಣಿಮಾ ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ SDMC ಉಪಾಧ್ಯಕ್ಷರಾದ ವಿಜಯ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜು ಪೂಜಾರಿ, ದಾನಿಗಳಾದ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಕ್ರೀಡಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಅಭಿವೃದ್ದಿಗೆ ಕೊಡುಗೆ ನೀಡಿದ ದಾನಿಗಳಾದ ವಿಲ್ಸನ್ ರೊಡ್ರಿಗಸ್, ರಶ್ಮಿ ರವಿ, ಪ್ರಕಾಶ್ ಶೆಟ್ಟಿಗಾರ್ ಮತ್ತು ವಿದ್ಯಾರ್ಥಿಗಳ ಬಹುಮಾನ ಪ್ರಾಯೋಜಕರಾದ ಸುಷ್ಮಾ ಸಂತೋಷ್ , ಶಾರದಾ ಗೋಳಿಬೆಟ್ಟು , ಜಲಜ ಪೂಜಾರಿ, ಲಕ್ಷ್ಮಣ್ ಮಡಿವಾಳ, ರಮೇಶ್ ಮಡಿವಾಳ, ಗುಲಾಬಿ ಮಡಿವಾಳ, ಶಿವರಾಮ್ ಕುಲಾಲ್ ರವರನ್ನು ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸಿದ ವಿಜಯ್ ಪೂಜಾರಿ ಮತ್ತು ಮಂಜನ ಗೌಡ ಪಾಟೀಲ್ ರವರನ್ನು ಶಾಲಾವತಿಯಿಂದ ಗುರುತಿಸಲಾಯಿತು. ಊರಿನ ಅನೇಕರು ಮಕ್ಕಳಿಗೆ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸೇವಾ ಸಮಿತಿಯ ಖಜಾಂಚಿಗಳಾದ ಸಫಲ್ ಶೆಟ್ಟಿ, ದಾನಿಗಳಾದ ಕುಸುಮ ಮನೋಜ್ ಕುಮಾರ್, ಸರ್ವ SDMC ಸದಸ್ಯರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು. ಸಹ ಶಿಕ್ಷಕಿ ಭವಾನಿ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು.