ಡೈಲಿ ವಾರ್ತೆ:18 ಆಗಸ್ಟ್ 2023
ಭಟ್ಕಳ: ಸರಕಾರ ಅನ್ನ ಭಾಗ್ಯ ಯೋಜನೆಗೆ ಕನ್ನ – 6000 ಕೆ.ಜಿ. ಅಕ್ಕಿ ವಶಕ್ಕೆ, ಮೂವರ ಬಂಧನ
ಉತ್ತರ ಕನ್ನಡ : ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಸರಕಾರ ಅನ್ನ ಭಾಗ್ಯ ಯೋಜನೆ 6000 ಕೆ.ಜಿ. ಅಕ್ಕಿಯನ್ನು ಹಾಗೂ ಆರೋಪಿಗಳ ಸಹಿತ ವಶಕ್ಕೆ ಪಡೆದ ಘಟನೆ ಆ. 17 ರಂದು ಗುರುವಾರ ನಡೆದಿದೆ.
ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಗಟೆಬೈಲ್ ಮೆಂಗೋ ಫಾರ್ಮ್ ಎದುರುಗಡೆ ಇರುವ ಗೊಡನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಸರ್ಕಾರದ ಅನ್ನ ಭಾಗ್ಯ ಯೋಜನೆಯ 6000 ಕೆ.ಜಿ ಅಕ್ಕಿಯನ್ನು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸ ಇನ್ಸೆಕ್ಟರ್ ಗೋಪಿಚಂದನ ನೇತೃತ್ವದಲ್ಲಿ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಆರೋಪಿಗಳ ಸಹಿತ ಸರ್ಕಾರದ ಅನ್ನಭಾಗ್ಯ ಯೋಜನೆಯ 6000 ಕೆ.ಜಿ ಅಕ್ರಮ ಅಕ್ಕಿ ವಶಕ್ಕೆ ಪಡೆಯಲಾಯಿತು.
ಆರೋಪಿಗಳಾದ ಗುಲ್ಸನ್ ಶಾಬ್, ರೆಹಮಾನ್, ಆಫ್ಸಲ್ ನ್ನು ಬಂಧಿಸಿ ತನಿಖೆ ನಡೆಸಿದ್ದು ಈ ಅನ್ನಭಾಗ್ಯದ ಅಕ್ರಮ ಅಕ್ಕಿ ಕುಂದಾಪುರದ ನಿಶಾನ ಎನ್ನುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಇದರಲ್ಲಿ 50ಕೆ.ಜಿ ಯ ಒಟ್ಟು 125 ಚೀಲಗಳಿವೆ. ನಂತರ ಆಹಾರ ನಿರೀಕ್ಷರಾದ ಪಾಂಡು ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರೊಂದಿಗೆ ಪಂಚನಾಮೇ ನಡೆಸಿ ವಶಪಡಿಸಿಕೊಂಡ 6000 ಕೆ.ಜಿ ಅಕ್ಕಿಯನ್ನು ಸರಕಾರಿ ಆಹಾರ ಗೋಡೊನ ಗೆ ಸಾಗಿಸುವ ಕ್ರಮ ಕೈ ಕೊಂಡಿದ್ದಾರೆ.