ಡೈಲಿ ವಾರ್ತೆ:22 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ಭಟ್ಕಳದಲ್ಲಿ ವಕೀಲರ ಮೇಲೆ ಹಲ್ಲೆ ಖಂಡಿಸಿ ಅಂಕೋಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ

ಅಂಕೋಲಾ : ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿರುವ ಕುರಿತು ಖಂಡಿಸಿ ಉ.ಕ. ಜಿಲ್ಲಾಧಿಕಾರಿಯವರಿಗೆ ಮತ್ತು ಅಂಕೋಲಾ ತಹಸೀಲ್ದಾರ್ ಅವರಿಗೆ ಮಂಗಳವಾರ ಅಂಕೋಲಾ ವಕೀಲರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಉಲ್ಲೇಖಿಸಿದಂತೆ ಆ.21ರಂದು ಭಟ್ಕಳದ ಮಂಜುನಾಥ ರಾಮ ಮೊಗೇರ ಎನ್ನುವ ವ್ಯಕ್ತಿ ಯು ಭಟ್ಕಳದ ವಕೀಲರಾದ ಗುರುದಾಸ ಮಂಜುನಾಥ ಮೊಗೇರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕೃತ್ಯವನ್ನು ಖಂಡಿಸಿ ಉತ್ತಕ ಕನ್ನಡದಲ್ಲಿ ಪದೇ ಪದೇ ವಕೀಲರ ಮೇಲೆ ಹಲ್ಲೆಯಾಗು ತ್ತಿರುವುದು, ವಕೀಲರು ತನ್ನ ಪಕ್ಷಗಾರರ ಪ್ರತಿನಿಧಿಯಾಗಿ ಕೆಲಸ ಮಾಡುವುದರಿಂದ ಅವರಿಗೆ ತಮ್ಮ ಕೆಲಸ ನಿರ್ವಹಿಸುವಾಗ ರಕ್ಷಣೆ ಅಗತ್ಯವಿರುತ್ತದೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮವನ್ನು ಅತೀ ಶೀಘ್ರದಲ್ಲಿ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ದಾಂಡೇಲಿಯ ವಕೀಲರಾದ ಅಜೀತ ನಾಯಕ ಅವರ ಮೇಲೆ ಹತ್ಯೆ ನಡೆದಿತ್ತು ಸ್ಮರಿಸಿದರು. ವಕೀಲರ ಮೇಲೆ ಇನ್ನು ಮುಂದೆ ಹಲ್ಲೆ ನಡೆಯದಂತೆ ತಡೆಯಲು ಸೂಕ್ತ ಕ್ರಮಕ್ಕಾಗಿ ಹಾಗೂ ಕಾಯ್ದೆ ತಿದ್ದುಪಡಿಗಾಗಿ ಕೂಡಲೇ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳು, ಗೃಹ ಸಚಿವ ರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉ.ಕ.ಜಿಲ್ಲಾ ನ್ಯಾಯಾಧೀಶರಿಗೆ ಮನವಿಯನ್ನು ರವಾನಿಸಲಾಗಿದೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಂಕೋಲಾ ವಕೀಲ ರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ನೋಟರಿ ಜಿಲ್ಲಾ ಸಂಘದ ಅಧ್ಯಕ್ಷ ನಾಗಾನಂದ ಐ. ಬಂಟ, ಉಪಾಧ್ಯಕ್ಷ ನಿತ್ಯಾನಂದ ಕವರಿ, ವಕೀಲರಾದ ಉಮೇಶ ಎನ್.ನಾಯ್ಕ, ವಿನಾಯಕ ನಾಯ್ಕ, ನಾರಾಯಣ ಆರ್. ನಾಯಕ, ಆರ್.ಟಿ.ಗೌಡ ಮತ್ತು ಅಂಕೋಲಾದಲ್ಲಿ ತಹಸೀಲ್ದಾರ್ ಅಶೋಕ ಎನ್.ಭಟ್ ಮನವಿ ಸ್ವೀಕರಿಸಿದರು. ಇದೇ ವೇಳೆ ವಕೀಲರಾದ ಬಿ.ಟಿ.ನಾಯಕ, ಜಿ.ವಿ.ನಾಯ್ಕ, ಗಜಾನನ ನಾಯ್ಕ, ಮಮತಾ ಕೆರಮನೆ, ಪ್ರತಿಭಾ ನಾಯ್ಕ ಇತರರಿದ್ದರು.