ಡೈಲಿ ವಾರ್ತೆ:24 ಆಗಸ್ಟ್ 2023

ಕಾಪು: ಮನೆ ಕಳ್ಳತನ ಪ್ರಕರಣ – ಆರೋಪಿಯ ಬಂಧನ, 8 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಕಾಪು: ಇಲ್ಲಿನ ಮನೆಯೊಂದರಲ್ಲಿ ಆಗಸ್ಟ್ 17 ರಂದು ಕಪಾಟಿನ ಲಾಕರ್ ಮುರಿದು ಚಿನ್ನಾಭರಣ ಕಳವುಗೈದ ಆರೋಪಿಯೋರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಕಾಪುವಿನ ಮನೆಯೊಂದರಲ್ಲಿ ಹಾಡುಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಬಗ್ಗೆ ಅನಿತಾ ಡಿಸಿಲ್ವಾ, ದೂರು ನೀಡಿದ್ದರು.

ಪ್ರಕರಣದಲ್ಲಿ ಆರೋಪಿಯ ಪತ್ತೆಗೆ ಕಾಪು ಪಿಎಸ್‌ಐ ಪುರುಷೋತ್ತಮ್ ನೇತೃತ್ವದ ತಂಡ ಅಚ್ಚಡ ಕ್ರಾಸ್ ಬಳಿ ಡಿಯೋ ಸ್ಕೂಟರ್‌ನಲ್ಲಿ ಬರುತ್ತಿದ್ದ ಆರೋಪಿತ ಅಚ್ಚಡ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ಕಳ್ಳತನ ನಡೆಸಿದ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ವಿವರ: ಚಿನ್ನದ ಕರಿಮಣಿ ಸರ-1, ತೂಕ 33.720 ಗ್ರಾಂ. ಅಂದಾಜು ಮೌಲ್ಯ ರೂ 1,85,460/- ಚಿನ್ನದ ಬಳೆ-3, ತೂಕ 30.040 ಗ್ರಾಂ ಮೌಲ್ಯ 1,65,220/- ಚಿನ್ನದ ಉಂಗುರ ಒಟ್ಟು-09, ತೂಕ 24,240 ಗ್ರಾಂ, ಅಂದಾಜು ಮೌಲ್ಯ ರೂ 1.20,016/- ಚಿನ್ನದ ಸರ-05 ತೂಕ 28.590 ಗ್ರಾಂ, ಅಂದಾಜು ಮೌಲ್ಯ ರೂ 1,47,930/- ಬ್ರಾಸ್ ಲೈಟ್-02, ತೂಕ 4.760 ಗ್ರಾಂ. ಅಂದಾಜು ಮೌಲ್ಯ ರೂ,24,327/ ಕಿವಿಯ ಓಲೆ-3, ತೂಕ 7.880 ಗ್ರಾಂ, ಅಂದಾಜು ಮೌಲ್ಯ ರೂ, 43,080/ ಚಿನ್ನದ ಕ್ರಾಸ್-1 ತೂಕ 0.920 ಗ್ರಾಂ, ಅಂದಾಜು ಮೌಲ್ಯ ರೂ 4,680 ಮೊಬೈಲ್ ಫೋನ್ ಅಂದಾಜು ಮೌಲ್ಯ ರೂ, 5,000/- ನಗದು ರೂಪಾಯಿ 36,370 ಕಪ್ಪು ಬಣ್ಣದ KA.20.EV.1563 ನಂಬ್ರದ Honda Dio ಸ್ಕೂಟರ್ ಅಂದಾಜು ಮೌಲ್ಯ ರೂ,70,000 ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ತೂಕ 16 ಪವನ್ 2.150 ಗ್ರಾಂ (130.150 ಗ್ರಾಂ) ಮೌಲ್ಯ ರೂ. 6,90,713/- ಒಟ್ಟು ವಶ ಪಡಿಸಿಕೊಂಡ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಹಾಗೂ ಇತರೇ ಸೊತ್ತಿನ ಒಟ್ಟು ಮೌಲ್ಯ 8,02,083 ಲಕ್ಷ ರೂ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಶ್ರೀ ಅಕ್ಷಯ್‌ ಎಂ. ಹಾಕೆ, ಐ.ಪಿ.ಎಸ್. ಮಾನ್ಯ ಪೊಲೀಸ್‌‌‌‌‌ ಅಧೀಕ್ಷಕರು, ಉಡುಪಿ ಜಿಲ್ಲೆ ಮತ್ತು ಶ್ರೀ ಎಸ್‌.ಟಿ ಸಿದ್ದಲಿಂಗಪ್ಪ, ಮಾನ್ಯ ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ಶ್ರೀ ಅರವಿಂದ ಕಲಗುಜ್ಜಿ ‌, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಕೆ.ಸಿ. ಪೂವಯ್ಯ , ವೃತ್ತ ನಿರೀಕ್ಷಕರು ಕಾಪು ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪುರುಷೋತ್ತಮ್‌ ಪಿ.ಎಸ್.ಐ(ತನಿಖೆ), ಕಾಪು ಠಾಣೆ , ಇವರ ಸಹಕರದಿಂದ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್ ಕಾಪು ವೃತ್ತ, ರಾಜೇಶ್‌ ಪಡುಬಿದ್ರಿ ಠಾಣೆ, ನಾರಾಯಣ ಕಾಪು ಠಾಣೆರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಶ್ರೀಧರ್‌, ಸುಧಾಕರ್‌ ಹಾಗೂ ಚಾಲಕರಾದ ಪ್ರಸಾದ್‌ ರವರು ಸಹಕರಿಸಿರುತ್ತಾರೆ.