ಡೈಲಿ ವಾರ್ತೆ:24 ಆಗಸ್ಟ್ 2023

ಮಹಿಳೆಯರ ಬಗ್ಗೆ ಅವಹೇಳನ ಬರಹ: ವಿಶ್ವೇಶ್ವರ ಭಟ್ ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಅಂಕೋಲಾ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೋಟಮ್ಮ, ಮಮತಾ ಬ್ಯಾನರ್ಜಿ ಸೇರಿದಂತೆ ಮಹಿಳಾ ರಾಜ ಕಾರಣ ಗಳ ಹಾಗೂ ಮಹಿಳಾ ಲೇಖಕಿಯರ ಕುರಿತು ಅವಹೇಳನಕಾರಿ ಲೇಖನ ಬರೆದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಗುರುವಾರ ಪೊಲೀಸ ಠಾಣೆಗೆ ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಟಿ.ಗಾಂವಕರ ಮಾತನಾಡಿ, ಆ.20 ರಂದು ವಿಶ್ವೇಶ್ವರ ಭಟ್ ಅವರು ಪೆಸ್‍ಪುಕ್ ಪೋಸ್ಟ್‍ನಲ್ಲಿ ಮಹಿಳೆಯರ ಬಿಗಿ ಉಡುಪಿನ ಬಗ್ಗೆ ಲೇಖನದಲ್ಲಿ ಮಹಿಳೆಯರ ಬಗ್ಗೆ, ಮಹಿಳೆಯರ ದೇಹದ ಬಗ್ಗೆಮ ಉಡುಗೆಯ ಹಾಗೂ ಅವರ ಘನತೆಗೆ ಕುಂದಾಗು ವಂತೆ ಅವಹೇಳನಕಾರಿಯಾಗಿ ಬರೆದಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹರಡಿದೆ. ಆದ್ದರಿಂದ ವಿಶ್ವೇಶ್ವರ ಭಟ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಿಐ ಸಂತೋಷ ಶೆಟ್ಟಿ ಪರವಾಗಿ ಪಿಎಸ್‍ಐ ಉದ್ದಪ್ಪ ಧರೆಪ್ಪನವರ್ ಮನವಿ ಸ್ವೀಕರಿಸಿದ್ದಾರೆ. ಈ ವೇಳೆ ಯಲ್ಲಿ ಮಹಿಳೆ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಮಂಜುಳಾ ವೆರ್ಣೇಕರ್, ಶಾಂತಿ ಆಗೇರ, ಸುಧಾ ನಾಯ್ಕ, ಸೀಮಾ ಕೇಣ , ದೀಪಾಲಿ ನಾಯ್ಕ, ಜೀವಿತಾ ಗಾಂವಕರ ಅಲಗೇರಿ ಇತರರಿದ್ದರು