ಡೈಲಿ ವಾರ್ತೆ:24 ಆಗಸ್ಟ್ 2023

ಉಡುಪಿ ನಗರದಲ್ಲಿ ಲೋಕಾರ್ಪಣೆಗೊಂಡ ಜಯಲಕ್ಷ್ಮೀ ಸಿಲ್ಕ್ಸ್ – ಉಡುಪಿ ವರ್ಣಮಯ ಇತಿಹಾಸಕ್ಕೆ ಮತ್ತೊಂದು ವರ್ಣಮಯ ಅಧ್ಯಾಯ ಇಂದು ಸೇರ್ಪಡೆಗೊಂಡಿದೆ : ಮಹಾಬಲೇಶ್ವರ ಭಟ್

ಉಡುಪಿ: ಉಡುಪಿ ಜಿಲ್ಲೆಯ ಹೆಸರಾಂತ ಜವಳಿ ಮಳಿಗೆ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ನ ನೂತನ ಕಟ್ಟಡವು ಉಡುಪಿ ಬನ್ನಂಜೆಯಲ್ಲಿ ದಿನಾಂಕ 24 ರಂದು ಗುರುವಾರ ಉದ್ಘಾಟನೆಗೊಂಡಿತು.

ಕರ್ನಾಟಕ ಬ್ಯಾಂಕಿನ ನಿವೃತ್ತ ಸಿಇಓ ಮಹಾಬಲೇಶ್ವರ ಭಟ್ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಉಡುಪಿಯ ವರ್ಣಮಯ ಇತಿಹಾಸಕ್ಕೆ ಮತ್ತೊಂದು ವರ್ಣಮಯ ಅಧ್ಯಾಯ ಇಂದು ಸೇರ್ಪಡೆಗೊಂಡಿದೆ. 1 ಲಕ್ಷ ಚದರ ಅಡಿಯ ವಿಶಾಲವಾದ ನೂತನ ಮಳಿಗೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ ವೀರೇಂದ್ರ ಹೆಗಡೆ ಹಾಗೂ ರವೀಂದ್ರ ಹೆಗಡೆ ಕುಟುಂಬಕ್ಕೆ ಧನ್ಯವಾದಗಳು ಕೋರಿ.
ಜಯ ಹಾಗೂ ಲಕ್ಷ್ಮೀ ಇದು ಎರಡು ಶಾಶ್ವತವಾಗಿ ಜಯಲಕ್ಷ್ಮೀಯಾಗಿ ಇರಲಿ, ಭಾರತದದ್ಯಾಂತ ಯಶಸ್ಸನ್ನು ಗಳಿಸಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಚಂದ್ರಯಾನ ಮೂರರ ಮೂಲಕ ದೇಶದಾದ್ಯಂತ ವಿಜ್ಞಾನಿಗಳು ಚಂದ್ರನನ್ನು ಅವಲೋಕಿಸಲು ಅವಕಾಶ ದೊರಕಿದೆ. ಹಾಗೆ ಜಯಲಕ್ಷ್ಮಿ ಮಳಿಗೆಯು ಜವಳಿ ಲೋಕವನ್ನು ಅವಲೋಕಿಸಲು ಗ್ರಾಹಕರಿಗೆ ಅವಕಾಶ ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉದ್ಯಾವರ ಹಲಿಮಾ ಸಬ್ಜು ಮಾಲೀಕರಾದ ಹಾಜಿ ಅಬ್ದುಲ್ ಜಲಿಲ್ ಸಾಹೇಬ್, ಉದ್ಯಮಿಗಳಾದ ಜಿ ಶಂಕರ್, ಜೆ ವಿ ಇನ್ಸೆಂಟ್ ಡಯಾಸ್, ಕರ್ನಾಟಕ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ರವಿಚಂದ್ರನ್, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜಯಲಕ್ಷ್ಮೀ ವೀರೇಂದ್ರ ಹೆಗಡೆ, ಅಪರ್ಣ ರವೀಂದ್ರ ಹೆಗಡೆ, ಸ್ಪೀಕರ್ ಯು ಟಿ ಖಾದರ್, ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಾಜಿ ಶಾಸಕ ಅಭಯ್ ಚಂದ್ರ ಜೈನ್, ಸಿಐಡಿ ಟಿವಿ ಶೋ ಕಾರ್ಯಕ್ರಮದ ದಯಾ ಶೆಟ್ಟಿ, ಉಡುಪಿ ಎಸ್‌ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮೊದಲದವರು ಉಪಸ್ಥಿತರಿದ್ದರು.