



ಡೈಲಿ ವಾರ್ತೆ:25 ಆಗಸ್ಟ್ 2023


ವರಮಹಾಲಕ್ಷ್ಮೀ ಹಬ್ಬ: ನೋಟಿನಿಂದ ಸಿಂಗಾರಗೊಂಡ ಕನಕಪುರದ ಕಬ್ಬಾಳಮ್ಮ
ರಾಮನಗರ: ವರಮಹಾಲಕ್ಷ್ಮಿ ಹಬ್ಬವನ್ನು ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕನಕಪುರದ ಕಬ್ಬಾಳಮ್ಮ ದೇವಿಗೆ ವಿವಿಧ ನೋಟುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿರುವ ಕಬ್ಬಾಳಮ್ಮ ದೇವಿಯನ್ನು ನೋಟಿನಿಂದ ಸಿಂಗಾರಗೊಳಿಸಲಾಗಿದೆ. ವಿವಿಧ ನೋಟುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದ್ದು, ದೇವಿ ಕಣ್ಮನ ಸೆಳೆದಿದ್ದಾಳೆ.
ಹಬ್ಬದ ಹಿನ್ನೆಲೆ ದೇವಿಯ ದರ್ಶನಕ್ಕೆ ಮುಂಜಾನೆಯಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ.