



ಡೈಲಿ ವಾರ್ತೆ:26 ಆಗಸ್ಟ್ 2023


ಆಪರೇಷನ್ ಹಸ್ತ ಚರ್ಚೆ ಬೆನ್ನಲ್ಲೇ ರಹಸ್ಯವಾಗಿ ಸಿಎಂ ಭೇಟಿಯಾದ ಮತ್ತೊಬ್ಬ ಬಿಜೆಪಿ ಶಾಸಕ
ಬೆಂಗಳೂರು: ಆಪರೇಷನ್ ಹಸ್ತ ವಿಚಾರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿಯ ಮತ್ತೊಬ್ಬ ಶಾಸಕ ಶಿವರಾಂ ಹೆಬ್ಬಾರ್ ಸಿಎಂ ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ.
ಎಸ್.ಟಿ ಸೋಮಶೇಖರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಬೆನ್ನಲ್ಲೇ ಶಿವರಾಂ ಹೆಬ್ಬಾರ್ ಕೂಡ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಭೇಟಿ ವೇಳೆ ಅರ್ಧ ಗಂಟೆಗೂ ಹೆಚ್ಚಿನ ಸಮಯ ಸಿಎಂ ಜೊತೆ ಅವರು ಚರ್ಚೆ ನಡೆಸಿದ್ದಾರೆ. ಈಗಾಗಲೇ ವಲಸಿಗರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಈ ಭೇಟಿ ಆಘಾತವನ್ನುಂಟು ಮಾಡಿದೆ.
ಶಿವರಾಂ ಹೆಬ್ಬಾರ್, ಸಿಎಂ ಭೇಟಿ ವೇಳೆ ಎಸ್.ಟಿ ಸೋಮಶೇಖರ್ ಸಹ ಜೊತೆಯಲ್ಲೆ ಇದ್ದರು. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಸೋಮಶೇಖರ್ ಅವರ ಎರಡನೇ ಭೇಟಿ ಕೂಡ ಆಗಿದೆ. ಈ ಇಬ್ಬರು ನಾಯಕರು ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಈಗ ಬೆಂಬಲಿಗರಲ್ಲಿ ಮೂಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ಇದೇ ವಿಚಾರವಾಗಿ ಸರಣಿ ಸಭೆಗಳನ್ನು ನಡೆಸುತ್ತಿದೆ. ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಕೆಲವರು ಪಕ್ಷ ತ್ಯಜಿಸಲು ಮುಂದಾಗಿರುವವರ ಜೊತೆ ಚರ್ಚೆ ನಡೆಸಿದೆ.