ಡೈಲಿ ವಾರ್ತೆ:30 ಆಗಸ್ಟ್ 2023
ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ- ಹೆಲ್ತ್ ಬುಲೆಟಿನ್ ರಿಲೀಸ್
ಬೆಂಗಳೂರು: ಮಂಗಳವಾರ ತಡರಾತ್ರಿ ದಿಢೀರ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ವೈದ್ಯರು ಇದೀಗ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದಾರೆ.
ಸದ್ಯ ಮಾಜಿ ಸಿಎಂ ಆರೋಗ್ಯ ಸುಧಾರಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾಳೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿರಬೇಕಾಗುತ್ತೆ ಎಂದು ಡಾ. ಸತೀಶ್ ಚಂದ್ರ ಹೇಳಿದ್ದಾರೆ.
ಕುಮಾರಸ್ವಾಮಿಯವರ ಎಡಭಾಗದಲ್ಲಿ ರಕ್ತನಾಳ ಸಮಸ್ಯೆಯಾಗಿತ್ತು. ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಹೀಗಾಗಿ ಅವರ ಮಾತು ತೊದಲುತ್ತಿತ್ತು, ತುಂಬಾ ಸುಸ್ತಾಗಿದ್ರು. ಅಡ್ಮಿಟ್ ಆದ ಒಂದು ಗಂಟೆಯಲ್ಲೇ ಆರೋಗ್ಯವಾಗಿದ್ದಾರೆ. ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ನಾಳೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿರಬೇಕಾಗುತ್ತೆ ಎಂದು ಹೇಳಿದರು.
ನಾಳೆ ಬೆಳಗ್ಗೆ ಮತ್ತೊಂದು ಹೇಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಈ ರೀತಿ ಸಮಸ್ಯೆಯಾದ ಮೂರು ಗಂಟೆಗಳಲ್ಲಿ ಆಸ್ಪತ್ರೆಗೆ ಬಂದಾಗ ಬೇಗ ಚೇತರಿಕೆ ಕಾಣಬಹುದು. ಮಾಜಿ ಮುಖ್ಯಮಂತ್ರಿಗಳು ಬೆಳಗ್ಗೆ 3.45 ಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರು ಮಾತನಾಡಲು ಕಷ್ಟಪಡುತ್ತಿದ್ದರು. ಎಡಭಾಗದ ರಕ್ತನಾಳ ಸಮಸ್ಯೆಯಿಂದ ಈ ರೀತಿಯಾಗಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ಪ್ರಾರಂಭ ಮಾಡಿದೆವು. ಚಿಕಿತ್ಸೆ ನೀಡಲು ಶುರು ಮಾಡಿದ 1 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.