ಡೈಲಿ ವಾರ್ತೆ:06 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ರಸ್ತೆ ಅಪಘಾತಕ್ಕೊಳಗಾದ ಟಾವೇರಾ ಕಾರ್‍ನಲ್ಲಿ ಲಕ್ಷಾಂತರ ರೂ.ಮೌಲ್ಯದ ಅಕ್ರಮ ಸರಾಯಿ ಪತ್ತೆ

ಅಂಕೋಲಾ : ರಸ್ತೆ ಅಪಘಾತಕ್ಕೊಳಗಾದ ಟಾವೇರಾ ಕಾರ್‍ನಲ್ಲಿ ಲಕ್ಷಾಂತರ ರೂ.ಮೌಲ್ಯದ ಅಕ್ರಮ ಸರಾಯಿ ಪತ್ತೆಯಾದ ಘಟನೆ ತಾಲೂಕಿನ ರಾ.ಹೆದ್ದಾರಿ 63ರ ಸುಂಕಸಾಳ ವ್ಯಾಪ್ತಿಯ ಕೋಟೆಪಾಲ ಹತ್ತಿರ ಮಂಗಳವಾರ ತಡರಾತ್ರಿ ನಡೆದಿದೆ.

ತವೇರಾ ಕಾರ್ (ಕೆಎ-30/9353) ನೇದ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಯಲ್ಲಿ ನಿಯಂತ್ರಣ ತಪ್ಪಿ ಕಾರ್‍ನ್ನು ರಸ್ತೆಯ ಬಲಬದಿಯ ಚರಂಡಿಯಲ್ಲಿ ಪಲ್ಟಿಯಾಗಿದೆ. ಟ್ರಾಫಿಕ್ ಪಿಎಸ್‍ಐ ಸುನೀಲ ಹುಲ್ಲೋಳ್ಳಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಕಾರ್‍ನಲ್ಲಿ ಗೋವಾ ರಾಜ್ಯದ 39,600 ರೂ.ಮೌಲ್ಯದ 750 ಎಂ.ಎಲ್‍ನ 120 ರಾಯಲ್ ಛಾಲೆಂಜ್ ವಿಸ್ಕಿ ಬಾಟಲಿಗಳು, 35640 ರೂ.ಮೌಲ್ಯ ದ 750 ಎಂ.ಎಲ್‍ನ 108 ರಾಯಲ್ ಸ್ಟಾಗ್ ವಿಸ್ಕಿ ಬಾಟಲಿಗಳು, 57780 ರೂ.ಮೌಲ್ಯದ 214 ಮೆನಶನ್ ಹೌಸ್ ಬ್ರಾಂದಿ ಬಾಟಲಿಗಳು ಹಾಗೂ 1.80 ಲಕ್ಷ ರೂ.ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಕುರಿತು ಪಿಎಸ್‍ಐ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾರ್ ಮಾಲಕನ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.