ಡೈಲಿ ವಾರ್ತೆ:06 ಸೆಪ್ಟೆಂಬರ್ 2023

ಕೃಷ್ಣ ಜನ್ಮಾಷ್ಠಮಿ ಸಂಭ್ರಮ- ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವಳಿ ಮಕ್ಕಳಿಗೆ ಕೃಷ್ಣನ ಅವತಾರ ತೊಡಿಸಿ ಮಸ್ತ್ ಆಗಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಮಕ್ಕಳ ಮುದ್ದಾದ ಫೋಟೋಗಳನ್ನ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅವಳಿ ಮಕ್ಕಳಿಗೆ ಬಿಳಿ ಪಂಚೆ ತೊಡಿಸಿ ಕೃಷ್ಣನ ಗೆಟಪ್‌ನಲ್ಲಿ ರೆಡಿ ಮಾಡಿದ್ದರೆ, ನೀಲಿ ಬಣ್ಣದ ಸೀರೆಯುಟ್ಟು ಸಿಂಪಲ್ ಆಭರಣ ಧರಿಸಿ ನಟಿ ಕಂಗೊಳಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಾಲನಟಿಯಾಗಿ ಗುರುತಿಸಿಕೊಂಡಿದ್ದ ನಟಿ, ಬಳಿಕ ‘ಚೆಲುವಿನ ಚಿತ್ತಾರ’ದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಈಗ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಅವಳಿ ಮಕ್ಕಳ ಆರೈಕೆಯಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ.

ಅಮೂಲ್ಯ ಅವರು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ಹೆಸರು ಇಟ್ಟಿದ್ದಾರೆ. ಇವರ ಕ್ಯೂಟ್ ಫೋಟೋಗಳನ್ನು ಅಮೂಲ್ಯ ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಇವರ ಕೃಷ್ಣನ ಗೆಟಪ್ ಸಾಕಷ್ಟು ಗಮನ ಸೆಳೆದಿದೆ.

ನೆಚ್ಚಿನ ನಟಿ ಅಮೂಲ್ಯ ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಆಗಬೇಕು ಎಂದು ಅಪಾರ ಅಭಿಮಾನಿಗಳ ಆಸೆ. ಅದರಂತೆ ನಟಿ ಕೂಡ, ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಮಾತನಾಡಿದ್ದರು.