ಡೈಲಿ ವಾರ್ತೆ:07 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಬುಕ್‍ಬ್ಯಾಂಕ್ ಯೋಜನೆಗೆ ಲಯನ್ಸ್ ಕ್ಲಬ್ ಕರಾವಳಿ ವತಿಯಿಂದ ಪುಸ್ತಕ ಕೊಡುಗೆ

ಅಂಕೋಲಾ : ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾದಾನವಾಗಿದ್ದು, ಅದನ್ನು ನೀಡುವ ಶಿಕ್ಷಕರು ಯಾವುದೇ ಫಲಾಪೇಕ್ಷೆಗಳಿಲ್ಲದೆ ವಿದ್ಯಾದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸವಾಗುತ್ತದೆ ಎಂದು ನಿವೃತ್ತ ಗ್ರಂಥಪಾಲಕ ಎಸ್.ಆರ್.ಉಡುಪ ಹೇಳಿದರು.
ಲಯನ್ಸ್ ಕ್ಲಬ್ ಕರಾವಳಿ ಅಂಕೋಲಾ ವತಿಯಿಂದ ಇಲ್ಲಿಯ ಕೆಎಲ್‍ಇ ಶಿಕ್ಷಣ ಮಹಾವಿದ್ಯಾಲಯಕ್ಕೆ 9300 ರೂ. ಮೌಲ್ಯದ ಸಂಗ್ರಹಿಸಿದ ಅಮೂಲ್ಯ ಪುಸ್ತಕಗಳನ್ನು ಬುಕ್‍ಬ್ಯಾಂಕ್ ಯೋಜನೆಗೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷ ಮಂಜುನಾಥ ಹರಿಕಂತ್ರ, ಸದಸ್ಯ ರಾದ ಮಹಾಂತೇಶ ರೇವಡಿ, ಡಾ. ಕರುಣಾಕರ ನಾಯ್ಕ, ದೇವಾನಂದ ಗಾಂವಕರ ಬಾಸಗೋಡ, ಸಂಜ ಯ ಅರುಂದೇಕರ, ಓಂಪ್ರಕಾಶ ಪಟೇಲ್ ಉಪಸ್ಥಿತರಿದ್ದು ಮಹಾವಿದ್ಯಾಲಯ ನಡೆಸುತ್ತಿರುವ ಬುಕ್‍ಬ್ಯಾಂಕ ಯೋಜನೆಗೆ ಶ್ಪಾಘನೀಯ ವ್ಯಕ್ತಪಡಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಗೆ ಅನುಕೂಲವಾಗಲಿ ಎಂದು ಹಾರೈಸಿದರು.

ಪುಸ್ತಕಗಳನ್ನು ಸ್ವೀಕರಿಸಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ, ಪುಸ್ತಕಗಳ ಮೌಲ್ಯ ಉತ್ತಮವಾಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವದಾಗಿ ತಿಳಿಸಿದರು.