ಡೈಲಿ ವಾರ್ತೆ:08 ಸೆಪ್ಟೆಂಬರ್ 2023
ಕೋಟ:ಉಚಿತ ಅಯುರ್ವೇದ ತಪಾಸಣೆ ಚಿಕಿತ್ಸೆ ಹಾಗೂ ಔಷದ ವಿತರಣೆ ಕಾರ್ಯಕ್ರಮ
ಕೋಟ:- ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೆಜು ಮತ್ತು ಅಮ್ರತೇಶ್ವರಿ ಶಿಕ್ಷಣ ಸಂಸ್ಥೆಯ ನೇತ್ರತ್ವದಲ್ಲಿ ಅಮ್ರತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಕೋಟ, ಗೀತಾನಂದ ಪೌಂಡೇಶನ್ ಮತ್ತು ಜನತಾ ಫಿಶ್ ಮೀಲ್ ಕೋಟ ಇವರ ಸಹಯೋಗದೊಂದಿಗೆ ಉಚಿತ ಅಯುರ್ವೇದ ತಪಾಸಣೆ ಚಿಕಿತ್ಸೆ ಹಾಗೂ ಔಷದ ವಿತರಣೆ ಕಾರ್ಯಕ್ರಮವು ನೆರವೆರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಪ್ರವರ್ತಕರು ಮತ್ತು ಅಮ್ರತೇಶ್ವರಿ ಆಯುರ್ವೇದಿಕ ಕಾಲೇಜಿನ ಟ್ರಸ್ಟೀಯಾದ ಶ್ರೀಯುತ ಆನಂದ ಸಿ ಕುಂದರ್ ಅವರು ‘ಆಯುರ್ವೇದ ವ್ಯೆದ್ಯಕೀಯ ಪದ್ದತಿಯು ಬಹಳ ಪುರಾತನ ಕಾಲದಿಂದ ಬಂದಿದ್ದು ಇದು ಜನಸಾಮನ್ಯರಿಗೆ ಸುಲಭವಾಗಿ ಕ್ಯೆಗೆಟುಕುವ ರೀತಿಯಲ್ಲಿ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶ ಮತ್ತು ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲು ನಾವು ಬದ್ದವಾಗಿದ್ದೇವೆ ಎಂದರು’
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗೀತಾನಂದ ಪೌಂಡೇಶನ್ ವಿಶ್ವಸ್ಥರಾದ ಗೀತಾ ಆನಂದ ಸಿ ಕುಂದರ್, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ತಿಮ್ಮ ಪೂಜಾರಿ ಅಮ್ರತೇಶ್ವರಿ ಅಯುರ್ವೇದಿಕ್ ಕಾಲೇಜು ಪ್ರಾಂಶುಪಾಲರಾದ ಡಾ ಪ್ರಸನ್ನಾ ಐತಾಳ್ ಕಾಲೇಜು ನಿಕಟಪೂರ್ವ ಅದ್ಯಕ್ಷರಾದ ಡಾ ಬಿ ಶ್ರೀಧರ ರಾವ್ ಕಾಲೇಜು ಮುಖ್ಯ ಲೆಕ್ಕಾಧಿಕಾರಿ ನಾಗರಾಜ ಶೆಟ್ಟಿ ಕೋಟ ಪಂಚಾಯತ ಅದ್ಯಕ್ಷರಾದ ಶ್ರಿಮತಿ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉಡುಪಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಉಪಸ್ಥತರಿದ್ದರು. ಗೀತಾನಂದ ಫೌಂಡೇಶನ್ ಸಂಯೋಜಕ ರವಿಕಿರಣ್ ಕೋಟ ಸಹಕರಿಸಿದರು. ಕಾರ್ಯಕ್ರಮದ ನಂತರ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ನಡೆಯಿತು.