



ಡೈಲಿ ವಾರ್ತೆ:08 ಸೆಪ್ಟೆಂಬರ್ 2023


ಕಂಡ್ಲೂರಿಗೆ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್. ಎಸ್. ಬೋಸರಾಜು ಭೇಟಿ – ರಿಂಗ್ ರೋಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಭರವಸೆ
ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಮನೆ ಪ್ರದೇಶಕ್ಕೆ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್. ಎಸ್. ಬೋಸರಾಜುರವರು ಸೆ. 8 ರಂದು ಭೇಟಿ ನೀಡಿದರು.
ಸಚಿವರು ಕಂಡ್ಲೂರು ಕಾವ್ರಾಡಿ ಪಂಚಾಯತ್ ಬಹು ನಿರೀಕ್ಷಿತ ಕಂಡ್ಲೂರಿನ ನದಿ ತೀರದ ತಗ್ಗು ಪ್ರದೇಶದವಾದ ಕೆಳಮನೆಗೆ ಸಂಪರ್ಕಿಸಲು ಹಲವು ವರ್ಷಗಳಿಂದ ಬೇಡಿಕೆ ಇರುವ ರಿಂಗ್ ರೋಡ್ ನಿರ್ಮಾಣ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಿಘ್ರದಲ್ಲೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಎಮ್.ಎಲ್.ಸಿ ಮಂಜುನಾಥ್ ಭಂಡಾರಿ, ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ, ದಿನೇಶ್ ಮೊಳಹಳ್ಳಿ, ಎಮ್.ಎ ಗಫೂರ್ ಹಾಗೂ ಕಾವ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೌಶೀನ್ ಹಸರತ್ , ಕಾವ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಪಂಚಾಯತ್ ಸದಸ್ಯರು ಮತ್ತು ಊರಿನ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.