ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಶಿಕ್ಷಕ ವಿನೋದ ನಾಯಕ ಬೊಮ್ಮಿಗುಡ್ಡಿರವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಅಂಕೋಲಾ : ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯವೈಖರಿಯನ್ನು ಮತ್ತು ಪ್ರತಿಭೆಯನ್ನು ಗುರುತಿಸಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿರುವುದು ನಿಜಕ್ಕೂ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದಂತಾ ಗಿದೆ ಎಂದು ಜಿಲ್ಲಾ ಪ್ರಶಸ್ತಿ ವಿಜೇತ ವಿನೋದ ನಾಯಕ ಬೊಮ್ಮಿಗುಡ್ಡಿ ಹೇಳಿದರು.

ತಾಲೂಕಿನ ವಂದಿಗೆ ಗ್ರಾಪಂ.ವ್ಯಾಪ್ತಿಯ ಬೊಳೆ ಗ್ರಾಮದಲ್ಲಿ ಸ್ಥಳೀಯರು ಸೇರಿ ಭಾನುವಾರ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನನ್ನ ಪ್ರೌಢ ಶಾಲೆ ಶಿಕ್ಷಣವನ್ನು ಪಟ್ಟ ಣದ ಜೈಹಿಂದ್ ಹೈಸ್ಕೂಲ್‍ನಲ್ಲಿ ಮುಗಿಸಿ ಪದವಿಯನ್ನು ಡಾ.ದಿನಕರ ದೇಸಾಯಿ ಅವರು ಪ್ರಾರಂಭಿಸಿದ ಜಿ.ಸಿ.ಕಾಲೇಜಿನಲ್ಲಿ ಪದವಿ ಮುಗಿಸಿ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ನನ್ನಗೆ ಕುಂದಾಪುರ ತಾಲೂಕಿನಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆಯ ಶಿಕ್ಷಕರಾಗಿ ವೃತ್ತಿ ಪ್ರಾರಂಭಿ ಸಿದೆ. ಅಲ್ಲಿಂದ ಶಾಲಾ ತಪಾಸಣಾ ಶಿಕ್ಷಣ ಸಂಯೋಜಕರಾಗಿ ಹಳಿಯಾಳ ತಾಲೂಕಿನ ವಲಯದಲ್ಲಿ ಕಾರ್ಯನಿರ್ವಹಿಸಿ, 2001 ರಿಂದ 2010 ರವರೆಗೆ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಯೋಜನೆಯ ಹಿರಿಯ ಅಧಿಕಾರಿಗಳಾಗಿ ನಿರ್ವಹಿಸಿದೆ. ಇದರ ಅಂಗವಾಗಿ ಶಿಕ್ಷಣ ಇಲಾಖೆ ಗುರುತಿಸಿ ನನಗೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿದೆ ಎಂದರು. ಇದೇ ವೇಳೆ ಸ್ಥಳೀಯ ನಾಗರಿಕರು ದಂಪತಿಗಳಾದ ವಿನೋದ ಎನ್. ನಾಯಕ ಮತ್ತು ನೂತನ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಧಾಕೃಷ್ಣ ನಾಯಕ, ಗೌರೀಶ ಬಿ.ನಾಯಕ, ಸುಮಿತ್ರ ಮನೋಹರ ನಾಯಕ, ಅರ್ಚಕರಾದ ದೇವಪ್ಪ ಗುನಗಾ, ಮಹಾಬಲೇಶ್ವರ ಭಟ್, ದೇವಣ್ಣ ಬೀರಣ್ಣ ನಾಯಕ, ಶಿವರಾಂ ನಾಯಕ, ಲಕ್ಷಣ ನಾಯಕ, ಬಾಬು ನಾಯಕ, ಲಕ್ಷ್ಮೀ ನಾಯಕ ವಿಕ್ರಮ ನಾಯಕ ಇತರರಿದ್ದರು. ವಂದಿಗೆ ಗ್ರಾಪಂ. ಅಧ್ಯಕ್ಷ ಸತೀಶ ನಾಯಕ ಬೊಮ್ಮಿಗುಡ್ಡಿ, ಸುಬ್ರಹ್ಮಣ್ಯ ನಾಯಕ, ಶಶಿಕುಮಾರ ಜಿ.ನಾಯಕ ನಿರ್ವಹಿಸಿದರು.