ಡೈಲಿ ವಾರ್ತೆ: 12/09/2023

22ರ ಹರೆಯದಲ್ಲಿ ಎಮ್ಮೆ ಕದ್ದವ 80ನೇ ವಯಸ್ಸಿನಲ್ಲಿ ಸಿಕ್ಕಿ ಬಿದ್ದ!

ಬೀದರ್: 58 ವರ್ಷಗಳಿಂದ ಪೊಲೀಸರ ಕೈಗೇ ಸಿಗದೇ ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳ್ಳನನ್ನು ಬೀದರ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ 1965ರಲ್ಲಿ 2 ಎಮ್ಮೆ, 1 ಕರು ಕದ್ದಿದ್ದರು. ಎಮ್ಮೆ ಮಾಲೀಕ ಮರಳೀಧರಾವ್ ಕುಲಕರ್ಣಿ ಎಂಬುವರು ಭಾಲ್ಕಿಯ ಮಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.