ಡೈಲಿ ವಾರ್ತೆ: 13/09/2023
ದಕ್ಷಿಣ ಕನ್ನಡ: ಪಪ್ಪಾಯ ತಿಂದು ಯುವತಿ ಅಸ್ವಸ್ಥ – ಡೆಂಗ್ಯೂಗೆ ಬಲಿ ಎಂದ ಆರೋಗ್ಯ ಇಲಾಖೆ.?
ಬಂಟ್ವಾಳ: ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಡೆಂಗ್ಯೂಗೆ ಬಲಿಯಾಗಿದ್ದಾಳೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಬಂಟ್ವಾಳ ತಾಲೂಕಿನ ಪೆರುವಾಯಿ ಮುಕ್ಕುಡಾಪು ನಿವಾಸಿ ಆಶಾ (20) ಮೃತಪಟ್ಟವಳು. ಮನೆಯಲ್ಲಿ ಹಸಿ ಪಪ್ಪಾಯ ತಿಂದು ತೀವ್ರವಾಗಿ ಅಸ್ವಸ್ಥಳಾಗಿದ್ದಳು. ಈ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ.
ಜ್ವರ ಬಂದು ಕಡಿಮೆಯಾಗಿದ್ದು, ಶನಿವಾರ ಮನೆಯಲ್ಲಿ ಹಸಿ ಪಪ್ಪಾಯಿಯನ್ನು ತಿಂದು ವಾಂತಿ ಹಾಗೂ ಅಲರ್ಜಿಗೊಳಗಾಗಿದ್ದಾಳೆ. ಪುತ್ತೂರು ಆಸ್ಪತ್ರೆಗೆ ಹೋಗುವ ಸಂದರ್ಭ ಕೋಮಾಕ್ಕೆ ಜಾರಿದ್ದು, ಅಲ್ಲಿಂದ ಮಂಗಳೂರಿಗೆ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಈ ಸಂದರ್ಭ ಮುಖ ಊದಿಕೊಂಡಿತ್ತೆನ್ನಲಾಗಿದೆ.
ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಡೆಂಗ್ಯು ದೃಢವಾಗಿದ್ದರಿಂದ ಅದರಿಂದಲೇ ಮೃತ ಪಟ್ಟಿರುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ಹೇಳಿದೆ.