

ಡೈಲಿ ವಾರ್ತೆ: 13/09/2023


ಪಡುಬಿದ್ರೆ: ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತ – ಯುವಕ ಸ್ಥಳದಲ್ಲೇ ಸಾವು.!
ಪಡುಬಿದ್ರಿ: ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(22) ಮೃತ ಯುವಕನಾಗಿದ್ದು. ಮೋಟಾರು ಬೈಕ್ ಬಸ್ಸಿಗೆ ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.