ಡೈಲಿ ವಾರ್ತೆ: 14/09/2023

ಕೋಟತಟ್ಟು ಗ್ರಾ. ಪಂ. ನ 2022-23ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮ

ಕೋಟ:1ನೇ ಕೋಟತಟ್ಟು ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮವು ದಿನಾಂಕ ಸೆ.13 ರಂದು ಬುಧವಾರ ಕೋಟತಟ್ಟು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಮಾಬಂದಿ ಅಧಿಕಾರಿ ಮಹಾಂತೇಶ್ ಸಹಾಯಕ ತೋಟಗಾರಿಕಾ ಅಧಿಕಾರಿ (ಬ್ರಹ್ಮಾವರ ಹೋಬಳಿ), ಸಹಾಯಕ ಅಧಿಕಾರಿಗಳಾದ ಶ್ರೀಮತಿ. ಉಷಾ ಶೆಟ್ಟಿ, ಕಾರ್ಯದರ್ಶಿ ಕೋಡಿ ಗ್ರಾಮ ಪಂಚಾಯತ್, ಸವಿತಾ ಡಿ. ಮೇಲ್ವಿಚಾರಕರು, ಶಿಶು ಅಭಿವೃದ್ದಿ ಯೋಜನಾ ಇಲಾಖೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ಪ್ರಕಾಶ್ ಎಚ್, ರಾಬರ್ಟ್ ರೋಡ್ರಿಗಸ್, ಶ್ರೀಮತಿ. ಜ್ಯೋತಿ, ಶ್ರೀಮತಿ. ಅಶ್ವಿನಿ, ಶ್ರೀಮತಿ. ವಿದ್ಯಾ ಪಿ., ಶ್ರೀಮತಿ. ಸಾಹಿರ ಬಾನು, ಶ್ರೀಮತಿ ಸೀತಾ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸ್ವ ಸಹಾಯ ಸಂಘಗಳ MBK ಶ್ರೀಮತಿ ವಾಣಿ, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ರವೀಂದ್ರ ರಾವ್ ಅವರು ನಿರೂಪಿಸಿದರು ಹಾಗೂ ಪಂಚಾಯತ್ ಕಾರ್ಯದರ್ಶಿಯಾದ ಶ್ರೀಮತಿ ಸುಮತಿ ಅಂಚನ್ ಅವರು ಸ್ವಾಗತಸಿದರು.