ಡೈಲಿ ವಾರ್ತೆ: 14/09/2023

ಚೈತ್ರ ಕುಂದಾಪುರ ಉದ್ಯಮಿಗೆ ವಂಚನೆ ಮಾಡಿದ್ದು 5 ಅಲ್ಲ 10 ಕೋಟಿ?

ಬೆಂಗಳೂರು: ಹಿಂದೂ ನಾಯಕಿ ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ್ದು, 10 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ಗೋವಿಂದ ಬಾಬು ಪೂಜಾರಿ ನೀಡಿದ ದೂರಿನ ಅನ್ವಯ ದಾಖಲಾದ ಎಫ್ಐಆರ್ನಲ್ಲಿ ಐದು ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ದಾಖಲಾಗಿದೆ. ಆದರೆ ಈಗ 10 ಕೋಟಿ ವಂಚನೆಯಾಗಿದೆ ಎಂದು ದೂರುದಾರ ಹೇಳುತ್ತಿದ್ದಾರೆ.

ದೂರುದಾರ ಗೋವಿಂದ ಬಾಬು ಪೂಜಾರಿ ಮಾಹಿತಿಯಂತೆ ಆಸ್ತಿ ಮೇಲೆ 10 ಕೋಟಿ ಸಾಲ ಪಡೆದು
₹10 ಕೋಟಿಯನ್ನು ಹಂತಹಂತವಾಗಿ ಅವರಿಗೆ ಕ್ಯಾಷ್ & ಡಿಡಿ ಮೂಲಕ ಚೈತ್ರಾ & ಗ್ಯಾಂಗ್‌ಗೆ ಹಣ ನೀಡಿರೋದಾಗಿ ಹೇಳುತ್ತಿದ್ದಾರೆ.

ಆಸ್ತಿ ಮೇಲೆ ಲೋನ್ ಪಡೆದದ್ದು ಹಾಗೂ ಚೈತ್ರಾ & ಗ್ಯಾಂಗ್‌ಗೆ ಹಣ ಕೊಟ್ಟಿರುವ ಕುರಿತ ಎಲ್ಲಾ ದಾಖಲೆ ಸಿಸಿಬಿಗೆ ಕೊಟ್ಟಿರೋದಾಗಿ ದೂರುದಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾಹಿತಿ ನೀಡಿದ್ದಾರೆ.

ಎಲ್ಲಾ ಸಾಕ್ಷಿಗಳನ್ನ ನಾನು ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದೇನೆ. ನನಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಕೊಟ್ಟ ಕೂಡಲೇ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.