ಡೈಲಿ ವಾರ್ತೆ: 14/09/2023
ದಕ್ಷಿಣ ಕನ್ನಡ: ಅಕ್ರಮ ಮರದ ದಿಮ್ಮಿಗಳ ಸಾಗಾಟ – ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಸಹಿತ ಆರೋಪಿ ವಶಕ್ಕೆ
ಬಂಟ್ವಾಳ : ಅಕ್ರಮವಾಗಿ ಮರ ಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿ ಆರೋಪಿ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಬಂಟ್ವಾಳದ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ವಾಹನ ಮತ್ತು ಸೊತ್ತಿನ ಮೌಲ್ಯ ರೂ. 3 ಲಕ್ಷ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ 12 ರಂದು ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಸಾಣೂರು ಎರ್ಮಾಳ್ ಪದವು ರಸ್ತೆ ಯ ಪಟ್ಟಾಜೆ ಎಂಬಲ್ಲಿ ಅಕ್ರಮವಾಗಿ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ.