ಡೈಲಿ ವಾರ್ತೆ: 14/09/2023
ವರದಿ: ವಿದ್ಯಾಧರ ಮೊರಬಾ
ಹಳ್ಳಿಯಾಳದಲ್ಲಿ ನಾಪತ್ತೆಯಾದ ಬೆಳಗಾವಿ ವ್ಯಕ್ತಿ ಅಂಕೋಲಾ ಹಟ್ಟಿಕೇರಿಯಲ್ಲಿ ಪತ್ತೆ.!
ಅಂಕೋಲಾ : ಹಳಿಯಾಳ ತಾಲೂಕಿನ ಅರಲವಾಡ್‍ದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಗ್ರಾಮದೇವಿ ಜಾತ್ರಿಯಲ್ಲಿ ನಾಪತ್ತೆಯಾದ ವ್ಯಕ್ತಿಯೊಬ್ಬನು ಹಟ್ಟಿಕೇರಿ ಟೋಲ್‍ಗೇಟ್ ಬಳಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ್‍ನ ಗೌಟಾನ್ ಓಣ ಯ ರವಿ ಅರ್ಜುನಪ್ಪ ಆರೇರ ಪತ್ತೆಯಾದ ವ್ಯಕ್ತಿ. ಈತನು ಹಟ್ಟಿಕೇರಿ ಟೋಲ್‍ಗೇಟ್ ಬಳಿ 15 ದಿನಗಳ ಹಿಂದೆ ಬಂದಿರುತ್ತಾನೆ. ಈತನಿಗೆ ಟೋಲ್‍ಗೇಟ್ ಸಿಬ್ಬಂದಿಗಳು ಊಟ ಉಪಚಾರ ನೀಡಿ ಮಾನವೀಯತೆ ಮರೆದಿದ್ದಾರೆ.
ಮಂದ ಬುದ್ದಿಯಂತೆ ಕಂಡಿರುವ ಆತನ ಹಸ್ತಾಕ್ಷರದಲ್ಲಿ ಬರೆದ ವಿಳಾಸ ಪತ್ತೆಗಾಗಿ ವಿನಾಯಕ ಕುಂಬಾರ ಇವರು ತನ್ನ ಸ್ನೇಹಿತನಾದ ಬೆಳಗಾವಿ ಬೈಲಹೊಂಗಲಿ ಮಾಜಿ ಎಂಎಲ್‍ಎ ಆಪ್ತ ಸಹಾಯಕ ಮಲ್ಲು ಅವ ರನ್ನು ಸಂಪರ್ಕಿಸಿ ರವಿ ಆರೇರ ಪೋಟೋ ವಾಟ್ಸ್‍ಪ್‍ನಲ್ಲಿ ಕಳುಹಿಸಿ, ಮನೆಯ ವಿಳಾಸವನ್ನು ಪತ್ತೆ ಮಾಡಲು ಸಾಧ್ಯವಾಯಿತ್ತು.
ರವಿ ಚಿಕ್ಕಮ್ಮ ಧಾರವಾಡ ವೀರಾಪುರದ ಜಯಶ್ರೀ ಕಾಡೇನವರ ಮೊಬೈಲ್‍ಗೆ ಸಂಪರ್ಕಿಸಿ ಆತನನ್ನು ಕರೆ ದುಕೊಂಡು ಹೋಗಲು ಗುರುವಾರ ಮಾರುತಿ ಓಮ್ನಿ ವಾಹನದಲ್ಲಿ ಆತನ ತಾಯಿ ರುದ್ರವ್ವ ಅರ್ಜುನ ಆರೇರ, ಚಿಕ್ಕಮ್ಮ ಜಯಶ್ರೀ ಕಾಡೇನವರ ಮತ್ತು ರುದ್ರವ್ವನ ಅಣ್ಣ ಬಂದಿರುತ್ತಾರೆ.
ಪತ್ತೆಯಾದ ರವಿ ಆರೇರ ತಾಯಿ ರುದ್ರವ್ವ ಆರೇರ ಮಾತನಾಡಿ, ಕಳೆದ 10 ವರ್ಷದ ಹಿಂದೆ ರವಿ ಆರೇರ ಮದುವೆ ಆಗಿದೆ. ಆದರೆ 2 ತಿಂಗಳಲ್ಲಿ ಸೊಸೆ ವಿಹಾವ ವಿಚ್ಚೇಧನ ಪಡೆದಿದ್ದಾಳೆ. ಅಂದಿನಿಂದ ಇಂದಿನ ತನಕ ಆತ ಮಂದ ಬುದ್ದಿಯಲ್ಲಿ ಇದ್ದು, ಮನೆಯಿಂದ ಎರಡ್ಮೂರು ಬಾರಿ ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ಸಹ ನೀಡಲಾಗಿತ್ತು. ಸ್ವಲ್ಪ ದಿನದ ನಂತರ ಪತ್ತೆಯಾಗಿದ್ದ. ಪುನಃ ಮೂರನೇ ಬಾರಿಗೆ ಕಳೆದ ಏಪ್ರಿಲ್ ತಿಂಗಳಲ್ಲಿ ನಾಪತ್ತೆಯಾಗಿರುವುದು ನನ್ನ ಕುಟುಂಬದವರು ದುಃಖದಲ್ಲಿ ಇದ್ದರು. ಮಗನ ಪತ್ತೆಗೆ ಸಹಕರಿಸಿದ ಟೋಲ್‍ಗೇಟ್‍ನ ಸಿಬ್ಬಂದಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ರುದ್ರವ್ವ ಆರೇರ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ವಿಳಾಸ ಪತ್ತೆ ಮತ್ತು ಊಟ ಉಪಚಾರ ಮಾಡಲು ಮಾನವೀಯತೆ ತೋರಿಸಿದ ನವೀನ ಗಾಂವಕರ, ಪಾಂಡುರಂಗ ನಾಯ್ಕ, ವಿನಾಯಕ ಕುಂಬಾರ, ನಿತೀನ್ ನಾಯ್ಕ, ದರ್ಶನ ನಾಯ್ಕ ಪ್ರಶಾಂತ ದುರ್ಗೇಕರ್, ಸಾಗರ ನಾಯ್ಕ, ರಾಜೇಶ ನಾಯ್ಕ, ವಿನೋದ ನಾಯ್ಕ, ಚಂದ್ರಹಾಸ ಭಂಡಾರಿ, ಮಂಜು ಗಾಂವಕರ ಇತರರಿದ್ದರು.
ಪಿಐ ಸಂತೋಷ ಶೆಟ್ಟಿ ನಿರ್ದೇಶನದಲ್ಲಿ ಎಎಸ್‍ಐ ಚಂದ್ರಕಾಂತ ನಾಯ್ಕ ಅವರು ಹಟ್ಟಿಕೇರಿ ಟೋಲ್‍ಗೇಟ್ ನಲ್ಲಿ ಪತ್ತೆಯಾದ ರವಿ ಅರ್ಜುನಪ್ಪ ಆರೇರ ಆತನ ತಾಯಿ ಮತು ಚಿಕ್ಕಮ್ಮನ ವಿಳಾಸವನ್ನು ಪರಿಶೀಲಿಸಿ ಮನೆಗೆ ಕರೆದುಕೊಂಡು ಹೋಗಲು ಸಮ್ಮತಿ ನೀಡಿದರು.