ಡೈಲಿ ವಾರ್ತೆ: 14/09/2023
ವರದಿ : ವಿದ್ಯಾಧರ ಮೊರಬಾ
ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಯಾವ ಕೆಲಸಗಳು ಕಠಿಣವಲ್ಲ: ಅಶೋಕ ಭಟ್
ಅಂಕೋಲಾ: ಸರ್ಕಾರ ಹಾಗೂ ಉಸ್ತುವಾರಿ ಮಂತ್ರಿಗಳ ನಿರ್ದೇಶನದಂತೆ ಜನ ಸಾಮಾ ನ್ಯರ ಮನೆ ಬಾಗಿಲಿಗೆ ಸರ್ಕಾರದ ಸೌಲತ್ತು ಸಿಗುವಂತಾಗಲು ನಾವೆಲ್ಲ ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಬಂದಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗು ವುದು ಎಂದು ತಹಸೀಲ್ದಾರ್ ಅಶೋಕ ಎನ್.ಭಟ್ ಹೇಳಿದರು.
ತಾಲೂಕಿನ ವಾಸರಕುದ್ರಿಗೆ ಗ್ರಾಪಂ.ವ್ಯಾಪ್ತಿಯ ಶಾಲಾವರಣದಲ್ಲಿ ಕುಮಟಾ ಎಸಿ ಕಲ್ಯಾಣ ಕಾಂಬಳೆ ಅಧ್ಯಕ್ಷ ತೆಯಲ್ಲಿ ಬುಧವಾರ ನಡೆದ ಗ್ರಾಮ ವಾಸ್ತವ್ಯ ಮತ್ತು ಪಿಂಚಣ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಯಾವ ಕೆಲಸಗಳು ಕಠಿಣವಲ್ಲ. ಮನುಷ್ಯ ಆತ್ಮ ವಿಶ್ವಾಶದಿಂದ ಬದುಕಬೇಕು. ಜನವಸತಿ ಗ್ರಾಮಗಳಿಗೆ ಸ್ಮಶಾನಭೂಮಿ ಪಡೆದು ಸ್ಮಶಾನವನ್ನು ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದರು.
ವಾಸರಕುದ್ರಿಗೆ ಗ್ರಾಪಂ.ಅಧ್ಯಕ್ಷ ಪ್ರದೀಪ ಎನ್.ನಾಯಕ ಮಾತನಾಡಿ, ಗಂಗಾವಳಿ ನದಿ ಪ್ರವಾಹ ಮತ್ತಿತರ ಸಂದರ್ಭದಲ್ಲಿ ಗ್ರಾಮಸ್ಥರು ಪಡುವ ತೊಂದರೆ, ಪಟ್ಟಣ ಹಾಗೂ ಎರಡು ರಾಷ್ಟ್ರೀಯ ಹೆದ್ದಾರಿಗಳ ಅತೀ ಹತ್ತಿರದಲ್ಲಿದ್ದರೂ ನಮ್ಮ ಗ್ರಾಪಂ.ಹಲವು ಮೂಲಭೂತ ಸಮಸ್ಯೆಗಳು ಹಿನ್ನಡೆಯಾಗಿದೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಬಗೆಹರಿಸುತ್ತಾರೆ ನಂಬಿಕೆ ಇದೆ ಎಂದರು.
ಕುಮಟಾ ಎಸಿ ಕಲ್ಯಾಣ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರ್ವಜನಿಕರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸವೆಂದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಮಾಡಿದಾಗ ಯಾವುದೇ ಕೆಲಸಗಳು ವಿಳಂಬವಾಗಲಾರದು. ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರು ಪ್ರಯೋಜನೆ ಪಡೆದುಕೊಳ್ಳಬೇಕು ಎಂದರು. ಸಿಡಿಪಿಓ ಸವಿತಾ ಶಾಸ್ತ್ರ ಮಠ, ಬಿಇಓ ಮಂಗಳಲಕ್ಷ್ಮೀ ಪಾಟೀಲ್ ಮತ್ತು ಗ್ರಾಮಸ್ಥ ನವೀನ ನಾಯಕ ಸಮಸ್ಯೆಗಳ ಕುರಿತು ಮಾತ ನಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಂದ ಚಾಲನೆಗೊಂಡ ಕಾರ್ಯಕ್ರಮ ವನ್ನು ವಾಸರಕುದ್ರಿಗೆ ಗ್ರಾಪಂ.ವ್ಯಾಪ್ತಿಯಲ್ಲಿ ಉದ್ಘಾಟಿಸಲಾಯಿತು.
ಉಪತಹಸೀಲ್ದಾರ್ ಸುರೇಶ ಹರಿಕಂತ್ರ, ಮಾಸ್ತಿಕಟ್ಟಾ ಆರ್‍ಎಫ್‍ಓ ವಿ.ಪಿ.ನಾಯ್ಕ, ಟಿಎಚ್‍ಓ ಡಾ.ಜಗದೀಶ ನಾಯ್ಕ, ಗ್ರಾಪಂ. ಉಪಾಧ್ಯಕ್ಷೆ ನಾಗಮ್ಮ ಗೌಡ, ಸದಸ್ಯರಾದ ಸುಬ್ರಾಯ ಗೌಡ, ದಯಾನಂದ ನಾಯ್ಕ, ಬೇಬಿ ಆಗೇರ, ಅರ್ಚನಾ ನಾಯಕ, ಅಂಗನವಾಡಿ ಮೇಲ್ವೆಚಾರಕಿ ಸುರೇಖಾ ನಾಯಕ ಭಾವಿಕೇರಿ, ಉಪಸ್ಥಿತರಿದ್ದರು. ಪಿಡಿಓ ಸಹನಾ ನಾಯಕ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಗೌರೀಶ ನಾಯಕ ಶಿರಗುಂಜಿ ನಿರ್ವಹಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ : ವಾಸರೆ ಗ್ರಾಪಂ.ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ. ಗ್ರಾಮನಕ್ಷೆ ಸಿಗು ತ್ತಿಲ್ಲಾ, ಪ್ರವಾಹ ಪೀಡತ ಪ್ರದೇಶ, ಗ್ರಾಮಕ್ಕೆ ಏತನೀರಾವರಿ ಸೌಲಭ್ಯ ಬೇಕಿದೆ. ಸ್ಮಶಾನಭೂಮಿ ಸರ್ಕಾರ ದಿಂದ ದೊರಕಬೇಕಿದೆ. 60 ವರ್ಷಗಳಿಂದ ಮೊದಲು ನೀಡಿದ ಭೂಮಿ ಮಂಜೂರಿಯಾಗದೆ ಸರ್ಕಾರದ ಯಾವುದೇ ಪ್ರಯೋಜನಗಳು ಅವರಿಗೆ ದೊರಕುತ್ತಿಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅಧಿಕಾ ರಿಗಳು ಬಗೆಹರಿಸಬೇಕೆಂದು ಸರ್ಕಾರಕ್ಕೆ ವಾಸರಕುದ್ರಿಗೆ ಗ್ರಾಪಂ.ಅಧ್ಯಕ್ಷ ಪ್ರದೀಪ ಎನ್. ನಾಯಕ ಅಧಿಕಾರಿ ವರ್ಗದವರಿಗೆ ವಿನಂತಿಸಿದ್ದಾರೆ.