ಡೈಲಿ ವಾರ್ತೆ:15 ಸೆಪ್ಟೆಂಬರ್ 2023

ಪಿ.ಟಿ. ಪ್ರಕಾಶ್ ಶೆಟ್ಟಿ, ಬೆಳಗೋಡು ಯವರ ಶೈಕ್ಷಣಿಕ ಬದುಕು ಇತರರಿಗೂ ಮಾದರಿ – ನಮ್ಮೆಲ್ಲರ ಮನದಲ್ಲಿ ಅವರು ಅಜರಾಮರ : ದಿನೇಶ್ ಹೆಗ್ಡೆ ಮೊಳಹಳ್ಳಿ ಅಭಿಮತ

– ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ,ಕುಂದಾಪುರ.

ಸುದ್ದಿ: ಮೊಳಹಳ್ಳಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗ್ರಾಮಸ್ಥರ ಹಾಗೂ ವಿದ್ಯಾಭಿಮಾನಿಗಳ ಮನದಲ್ಲೇ ತನ್ನ ಹೆಸರನ್ನು ಪ್ರತಿಷ್ಠಾಪಿಸಿಕೊಂಡು ಕಳೆದ ವರ್ಷ ನಮ್ಮನ್ನೆಲ್ಲಾ ಬಿಟ್ಟು ಹೋಗಲಿ ಹೋದರು ಆದರೆ ಅವರ ನೆನಪು ಈ ಶಾಲೆಯಲ್ಲಿ ಅಜರಾಮರ ಎನ್ನುವುದೇ ಮರೆಯಲಾಗದ ನೆನಪು. ಅವರು ಶಿಕ್ಷಕರಾಗಿರದೆ ನಮ್ಮೊಳಗಿನ ಅದ್ಭುತ ಶಕ್ತಿಯಾಗಿ ಹೊರಹೊಮ್ಮಿದ ಹಿರಿಯ ಚೇತನ…! ಯಕ್ಷರಂಗ ಕ್ರೀಡಾ ರಂಗ, ನಿರೂಪಣೆಯ ಶಕ್ತಿಯಾಗಿ ವಿವಿಧ ಮಜಲುಗಳಲ್ಲಿ ತನ್ನನ್ನು ರೂಪಿಸಿಕೊಂಡು ಶಿಕ್ಷಕ ವೃತ್ತಿಯನ್ನು ತೊಡಗಿಸಿಕೊಂಡಂತಹ ಅದ್ಭುತ ಮೇದಾವಿ….!” ಕ್ರೀಡಾ ಜಗತ್ತಿನ ಭೀಷ್ಮನಾಗಿ, ಅದ್ಭುತ ಶಕ್ತಿಯ ನೇತಾರರಾಗಿ ಕಂಡುಕೊಂಡಂತಹ ಆತ್ಮೀಯ ಶಿಕ್ಷಕರಿಗೆ ನುಡಿ ನಮನ.

ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಸೇವೆಯನ್ನ ನಿರ್ವಹಿಸಿ, ಕಳೆದ ವರ್ಷ 12/09/2022 ರಂದು ದಿವಂಗತರಾಗಿರುತ್ತಾರೆ. ಅವರ ಒಂದು ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ದಿ.ಪ್ರಕಾಶ್ ಶೆಟ್ಟಿ ಬೆಳಗೋಡು,ದೈಹಿಕ ಶಿಕ್ಷಣ ಶಿಕ್ಷಕರು ಇವರ ಪ್ರಥಮ ಪುಣ್ಯಸ್ಮರಣೆಯ ಪ್ರಯುಕ್ತ ಸ.ಹಿ.ಪ್ರಾ.ಶಾಲೆ ಮೊಳಹಳ್ಳಿ ಇಲ್ಲಿ ಮುದ್ದು ಕೃಷ್ಣ- ಮುದ್ದು ರಾಧೆ ಸ್ಪರ್ಧೆ- 2023 ಆಯೋಜಿಸಲಾಯಿತು. ಪುಣ್ಯ ಸ್ಮರಣೆಯ ಅಂಗವಾಗಿ ವೇದಿಕೆ ಕಾರ್ಯಕ್ರಮವನ್ನು ಊರವರ ಸಮ್ಮುಖದಲ್ಲಿ ಆಯೋಜನೆ ಮಾಡಲಾಗಿತ್ತು. ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ದಿನೇಶ್ ಹೆಗ್ಡೆಯವರು ಪ್ರಕಾಶ್ ಶೆಟ್ಟಿಯವರು ಮಾತನಾಡುತ್ತಾ ಪ್ರಕಾಶ ಶೆಟ್ಟಿ ಅವರ ಶೈಕ್ಷಣಿಕ ಬದುಕು ಇತರರಿಗೆ ಮಾದರಿ ಮತ್ತು ಅವರ ಸೇವ ಕಾರ್ಯ ಗ್ರಾಮದಲ್ಲಿನ ಸಮಸ್ತ ಜನರ ಅಭಿಷೇಕ್ತಿಯಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಜನ ಮೆಚ್ಚುವಂತೆ ಕೆಲಸ ಮಾಡಿ ಇಂದು ಅಜರಾಮರರಾಗಿದ್ದಾರೆ ಎಂದು ಹೇಳಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ದ್ಯಾವಲಬೆಟ್ಟು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸದಾನಂದ ಬೈಂದೂರು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ ಎಂ.ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ವಾಣಿ.ಆರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗೋವಿಂದ ಎಸ್. ಶ್ರೀ ಪ್ರಕಾಶ್ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಅನುರಾಧ ಪಿ.ಶೆಟ್ಟಿ, ಅನೀಶ್ ಶೆಟ್ಟಿ ಬೆಳಗೋಡು ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ಶ್ರೀ ಗಣೇಶ್ ಶೆಟ್ಟಿ ನಿರೂಪಿಸಿದರು. ಶಾಲಾ ಶಿಕ್ಷಕರಾದ ಶ್ರೀ ವೆಂಕಟ ಕುಲಾಲ್, ಶ್ರೀಮತಿ ಪ್ರೀತಿ ಬಿ.ಶೆಟ್ಟಿ, ಸುಜಾತ, ಶ್ರೀಮತಿ ಗೀತಾಂಜಲಿ ಸಹರಿಸಿದರು.ಸಹಶಿಕ್ಷಕಿ ಶ್ರೀಮತಿ ಶೋಭಾ. ಸಿ. ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು.