ಡೈಲಿ ವಾರ್ತೆ:17 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾ ಅರ್ಬನ್ ಬ್ಯಾಂಕಿಗೆ 62.10 ಲಕ್ಷ ರೂ. ಲಾಭ: ಶೇರುದಾರರಿಗೆ ಶೇ.8 ಲಾಭಂಶ – ಭಾಸ್ಕರ ನಾರ್ವೇಕರ್
ಅಂಕೋಲಾ : 2022-23ನೇ ಸಾಲಿನ ಮಾರ್ಚ ತಿಂಗಳ ಅಂತ್ಯಕ್ಕೆ 62.10 ಲಕ್ಷ ರೂ ನಿವ್ವಳ ಲಾಭವಾಗಿ ದ್ದು, ಶೇರುದಾರರಿಗೆ ಶೇ.8 ಡಿವಿಡೆಂಡ್ ನೀಡಲಿದ್ದೇವೆ. ಇದಕ್ಕೆ ಬ್ಯಾಂಕಿನ ಶೇರುದಾರರು, ಗ್ರಾಹಕರು ಮತ್ತು ಎಲ್ಲಾ ನಿರ್ದೇಶಕರ ಸಹಕಾರದ ಜತೆಯಲ್ಲಿ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಅಂಕೋಲಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ್ ಹೇಳಿದರು.
ಬ್ಯಾಂಕಿನ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ 110ನೇ ವಾರ್ಷಿಕ ಸಭೆಯಲ್ಲಿ ಅವರು ಮಾತ ನಾಡಿ, ಕಟ್ಟಾಬಾಕಿ ಸಾಲದ ವಸೂಲಿಗಾಗಿ ಸಹಕಾರಿ ಸಂಘಗಳ ಕಾಯ್ದೆ 1959 ರಡಿಯಲ್ಲಿ ಮಾರಾಟಾಧಿ ಕಾರಿಗಳ ಮತ್ತು ಸಿವಿಲ್ ಕೋರ್ಟ ಮುಖಾಂತರ ಕ್ರಮ ಕೈಕೊಂಡಿರುತ್ತೇವೆ. ಈ ನಿಟ್ಟಿನಲ್ಲಿ ಸಾಲಗಾರರ ಬಂಧುಗಳ ತಮ್ಮ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕಿನ ಏಳ್ಗೆಗಾಗಿ ಸಹಕರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಖಾಸಗಿ ಬ್ಯಾಂಕುಗಳ ಸಹಕಾರಿ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕೆ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಲಾಗಿದೆ. ಕುಮಟಾದಲ್ಲಿ ಶೀಘ್ರವಾಗಿ ಇನ್ನೊಂದು ಶಾಖೆ ತೆರೆಯಲಿದ್ದೇವೆ ಎಂದರು.
ಸಭೆಯಲ್ಲಿ ವಿನೋದ ಬಿ.ನಾಯಕ ಬಾಸಗೋಡ, ಎಸ್.ಆರ್.ನಾರ್ವೇಕರ್, ಜಗದೀಶ ಜಿ.ನಾಯಕ, ಉಮೇಶ ಎನ್.ನಾಯ್ಕ, ಡಿ.ಎನ್.ನಾಯಕ, ಉದಯ ವಿ.ನಾಯಕ ಭಾವಿಕೇರಿ, ನಾರಾಯಣ ನಾಯಕ, ಜಗದೀಶ ಜಿ.ನಾಯಕ ಹೊಸ್ಕೇರಿ, ವಿಜಯ ನಾಯಕ, ಆರ್.ಟಿ.ಮಿರಾಶಿ ಹಲವರು ಸಲಹೆ ಸೂಚನೆ ನೀಡಿ ದರು.
ಬ್ಯಾಂಕಿನ ಉಪಾಧ್ಯಕ್ಷ ಗೋವಿಂದರಾಯ ನಾಯ್ಕ, ನಿರ್ದೇಶಕರಾದ ಭೈರವ ಡಿ.ನಾಯ್ಕ (ಬಿ.ಡಿ.ನಾಯ್ಕ), ಗೋಪಾಲಕೃಷ್ಣ ನಾಯಕ, ಚಂದ್ರಕಾಂತ ಜಿ.ನಾಯ್ಕ, ಕೃಷ್ಣಾನಂದ ಶೆಟ್ಟಿ, ರಾಜೇಂದ್ರ ಎಸ್.ಶೆಟ್ಟಿ, ಉಮೇಶ ಜಿ. ನಾಯ್ಕ, ನಾಗಾನಂದ ಆಯ್.ಬಂಟ, ಪ್ರಕಾಶ ಆರ್. ಕುಂಜಿ, ಪ್ರಭಾ ಹಬ್ಬು, ಅನುರಾಧ ಎಸ್.ನಾಯ್ಕ, ಗೌರಿ ಸಿದ್ಧಿ, ವೃತ್ತಿಪರ ನಿರ್ದೇಶಕರಾಗಿ ಗುರುನಾಥ ಬಿ.ರಾಯ್ಕರ, ಯೋಗಿತಾ ಕಾಮತ ಉಪಸ್ಥಿತರಿದ್ದರು.
ಸಭೆಯಲ್ಲಿ ನಾಗೇಂದ್ರ ನಾಯ್ಕ, ವಿ.ಎನ್.ನಾಯಕ, ನಾರಾಯಣ ನಾಯಕ, ಮಧುಕರ ಶೇಡಗೇರಿ, ಅರುಣ ನಾಡಕಣ ್, ಅಶೋಕ ಬಲೇಗಾರ, ಕೆ.ಎಚ್.ಗೌಡ, ನಾರಾಯಣ ನಾಯಕ ಯಲ್ಲಾಪುರ, ಮುರಲೀಧರ ಬಂಟ, ರವೀಂದ್ರ ಕೇಣ , ರಾಜು ಹರಿಕಂತ್ರ, ಆರ್.ಟಿ.ಗೌಡ ಸೇರಿದಂತೆ ನೂರಾರು ಜನರು ಹಾಜರಿದ್ದರು.
ಪ್ರಧಾನ ವ್ಯವಸ್ಥಾಪಕ ರವೀಂದ್ರ ಪಿ.ವೈದ್ಯ, ವ್ಯವಸ್ಥಾಪಕ ಉದಯ ಶೇಣ ್ವ, ಸಹಾಯಕ ವ್ಯವಸ್ಥಾಪಕರಾದ ನಾಗರಾಜ ಶೆಟ್ಟಿ, ದೀಪಕ ತಾಳೇಬೈಲಕರ್ ನಿರ್ವಹಿಸಿದರು. ಸಿಬ್ಬಂದಿಗಳಾದ ಮಹಾಬಲೇಶ್ವರ ಬಂಡಿಕಟ್ಟೆ, ಶ್ರೀಧರ ನಾಗರಕಟ್ಟೆ, ನಾಗರಾಜ ಡಿ.ಶೆಟ್ಟಿ, ಜಯಂತ ಜಿ.ನಾಯ್ಕ, ಅರುಣ ಕೇಣ , ದಿನಕರ ಗಾಂವಕರ, ದಿನೇಶ ದೇಸಾಯಿ, ರೇಖಾ ಕೇಣ , ಉಮೇಶ ನಾಯ್ಕ, ಸಂತೋಷ ನಾಯ್ಕ, ರವಿನಾಥ ಗೌಡ, ನವೀನ ನಾರ್ವೇಕರ್ ಇತರರಿದ್ದರು.