ಡೈಲಿ ವಾರ್ತೆ: 23/Sep/2023

ಕೋಟತಟ್ಟು ಗ್ರಾ. ಪಂ.ನ 4 ಮತ್ತು 5ನೇ ವಾರ್ಡ್ ನ ಡಿಜಿಟಲ್ ಫಲಾನುಭವಿಗಳಿಗೆ ತರಬೇತಿ ಕಾರ್ಯಕ್ರಮ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಗ್ರಾಮವಾಗಿ ಆಯ್ಕೆಗೊಂಡಿರುವುದರಿಂದ 4 ಮತ್ತು 5ನೇ ವಾರ್ಡ್ ನ ಡಿಜಿಟಲ್ ಫಲಾನುಭವಿಗಳಿಗೆ ದಿನಾಂಕ 23-05-2023ರ ಶನಿವಾರ ಸ.ಹಿ.ಪ್ರಾ.ಶಾಲೆ, ಕೋಟತಟ್ಟು ಪಡುಕರೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.

ಶಿಕ್ಷಣ ಫೌಂಡೇಶನ್ ನ ಜಿಲ್ಲಾ ಸಂಯೋಜಕರಾದ ಶ್ರೀಮತಿ. ರೀನಾ ಎಸ್ ಹೆಗ್ಡೆ ಅವರು ಡಿಜಿಟಲ್ ಮೊಬೈಲ್ ಬಳಕೆ ಹಾಗೂ ಅದರಿಂದ ಆಗುವ ಸದುಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್, ಸದಸ್ಯರಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ಶ್ರೀಮತಿ ಅಶ್ವಿನಿ, ಶ್ರೀಮತಿ ವಿದ್ಯಾ ಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್, ಶಿಕ್ಷಣ ಫೌಂಡೇಶನ್ ನ ತಾಲೂಕು ಸಂಯೋಜಕರಾದ ಶ್ರೀಮತಿ. ಶಿಲ್ಪ, ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದ ಗ್ರಂಥಪಾಲಕರಾದ ಶ್ರೀಮತಿ. ಶೈಲಜಾ ಹಾಗೂ 4 ಮತ್ತು 5 ನೇ ವಾರ್ಡ್ ನ ಡಿಜಿಟಲ್ ಫಲಾನುಭವಿಗಳು ಉಪಸ್ಥಿತರಿದ್ದರು.