ಡೈಲಿ ವಾರ್ತೆ: 23/Sep/2023
2024 ರ ಲೋಕಸಭೆ ಚುನಾವಣೆ:
ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುಧೀರ್ ಕುಮಾರ್ ಮಾರೋಳ್ಳಿ…?
ಉಡುಪಿ: ದೇಶದಲ್ಲೇ ಅತ್ಯಂತ ದೊಡ್ಡ ಚರಿತ್ರೆಯನ್ನೇ ಹೊಂದಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಪ್ರಭಾವಿ ಯುವ ನಾಯಕರೊಬ್ಬರನ್ನು ಕಾಂಗ್ರೆಸ್ ಹೈಕಮಾಂಡ್ ಗುರುತಿಸಿದೆ.
ಈ ಬಾರಿಯ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಯಿಂದ ಸ್ಪರ್ಧಿಸಲು ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಹಾಗೂ ವಿನಯ್ ಕುಮಾರ್ ಸೊರಕೆರವರ ಹೆಸರು ಮುಂಚೂಣಿಯಲ್ಲಿ ಇರುವಾಗಲೇ ರಾಜಕೀಯವಾಗಿ ಅನುಭವಿ ಚಾರಿತ್ರ್ಯವಂತ ರಾಜಕಾರಣಿ, ಎಂದೇ ಹೆಸರು ಗಳಿಸಿರುವ ಕೊಪ್ಪದ ವಕೀಲರು ಎಂದೇ ಖ್ಯಾತರಾದ ಸುಧೀರ್ ಕುಮಾರ್ ಮಾರೋಳ್ಳಿ ಹೆಸರು ಬಹುತೇಕವಾಗಿ ಖಚಿತ ಗೊಂಡಿರುವ ಕುರಿತು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ಮುಂದಾಳತ್ವದ I-N-D-I-A ಮೈತ್ರಿಕೂಟದ ಸಭೆಯಲ್ಲಿ ಇನ್ನು ಒಂದು ತಿಂಗಳ ಒಳಗಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಗೊಳಿಸಲಾಗುವುದು ಎಂದು ಘೋಷಿಸಿದ ಬೆನ್ನಲ್ಲೇ ಮಾರೋಳ್ಳಿ ಕಾಂಗ್ರೆಸ್ ಸ್ಪರ್ಧೆ ವಿಚಾರ ಮುನ್ನೆಲೆಗೆ ಬಂದಿದೆ.
ಸುಧೀರ್ ಕುಮಾರ್ ಮಾರೋಳ್ಳಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿಯಲ್ಲಿ ಕೆಲವು ಪ್ರಮುಖ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದು, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದವರು, ವಿವಿಧ ಸಂಘಟನೆಯಲ್ಲಿ ತಮ್ಮ ಚಾಪು ಮೂಡಿಸಿದವರು. ಹಿಂದಿನ ಲೋಕಸಭೆ, ವಿಧಾನ ಸಭೆ, ಮುಂತಾದ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು, ಪ್ರಮುಖ ಭಾಷಣಕಾರರಾಗಿ, ಕಾರ್ಯಕರ್ತರ ನಾಯಕರ ಮನಸ್ಸು ಗೆದ್ದವರು. ಪ್ರಸ್ತುತ ಕೆಪಿಸಿಸಿ ಪ್ರಮುಖ ವಕ್ತಾರರು ಕೂಡ. ಇವರ ಸ್ಪರ್ಧೆಗಾಗಿ ಬಾರಿ ಬೆಂಬಲ ವ್ಯಕ್ತವಾಗಿರುವುದರಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಸೇರಿದಂತೆ ಉಭಯ ಜಿಲ್ಲೆಗಳ ಹಲವಾರು ನಾಯಕರು, ಪಕ್ಷದ ವಿವಿಧ ಸಂಘಟನೆಗಳು, ಕೆಪಿಸಿಸಿ ಮತ್ತು ಎಐಸಿಸಿ ಗೆ ಒತ್ತಡ ತಂದಿದ್ದಾರೆ. ಉತ್ತಮ ವಾಗಿ, ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಜನರಿಗೆ ತಲುಪಿಸುವ ವಿಚಾರವಂತ, ಸಮರ್ಥ ಅಭ್ಯರ್ಥಿತನ, ಪಕ್ಷ ಕಟ್ಟುವಲ್ಲಿ, ವಿಚಾರ ತಲುಪಿಸುವಲ್ಲಿ ಜನರ ಸಮಸ್ಯೆ ಆಲಿಸುವಲ್ಲಿ ಪರಿಹಾರ ಒದಗಿಸುವಲ್ಲಿ ಕ್ಷೇತ್ರದ ಜನರಿಗೆ ಸಾಂತ್ವನ ಹೇಳುವಲ್ಲಿ ಕ್ಷೇತ್ರದ ಜನರ ಸೇವೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ
ಮಾರೋಳ್ಳಿಗೆ ಸಿಗಲಿ ಅವಕಾಶ ಎಂಬುದು ಕರಾವಳಿ, ಮಲೆನಾಡಿನ ಜನತೆಯ ಆಶಯವಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿ ಹುದ್ದೆಗಳೊಂದಿಗೆ ರಾಜ್ಯ ಪ್ರವಾಸ ಮಾಡುತ್ತ ಪಕ್ಷ ಸಂಘಟನೆ ಮಾಡುತ್ತಿರುವ ಸುಧೀರ್‌ಕುಮಾರ್ ಮುರೊಳ್ಳಿ ಮಾತಿಗೆ ನಿಂತರೆ ಸರಸ್ವತಿ ಸರಾಗವಾಗಿ ಹರಿದಾಡುತ್ತಾಳೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಸಮಸ್ಯೆ, ಪರಿಹಾರಗಳ ಬಗ್ಗೆ ಜ್ಞಾನ-ಭಂಡಾರ ವಾಗಿರುವ ಇವರು ಎರಡೂ ಜಿಲ್ಲೆಗಳ ತಳಮಟ್ಟದ ಸಮಸ್ಯೆಗಳನ್ನು ಅರಿತವರಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯಕರ್ತರ ಹೆಸರು ಹೇಳಿ ಕರೆಯುವಷ್ಟೂ ಸಂಬಂಧ ಹೊಂದಿರುವವರು. ಇವರಿಗೆ ಕಾಂಗ್ರೆಸ್ ಪಕ್ಷ ಅವಕಾಶವನ್ನು ಕಲ್ಪಿಸಬೇಕೆಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುರೊಳ್ಳಿ ಅಭಿಮಾನಿ ಬಳಗ ಹೈಕಮಾಂಡ್ ಮಟ್ಟದಲ್ಲಿ, ಉನ್ನತ ನಾಯಕರಿಗೆ ಮನವರಿಕೆ ಮಾಡಿದೆ.
ಕರಾವಳಿ ಮಲೆನಾಡಿನ ಸಾಂತ್ವನ ಕೇಂದ್ರ. ಮಲೆನಾಡಿನಲ್ಲಿ ಕ್ಷೇತ್ರಗಳಲ್ಲಿ ಜಾತ್ಯಾತೀತತೆ ಗಟ್ಟಿಯಾಗಿ ಬೆಳೆಯಲು ಮತ್ತು ಜಾತ್ಯತೀತ ವಿಚಾರಗಳನ್ನು ಯುವ ಸಮೂಹದಲ್ಲಿ ಬೇರೂರಲು ಬಹುದೊಡ್ಡದಾಗಿ ಶ್ರಮ ವಹಿಸಿ ಕೆಲಸ ಮಾಡುತ್ತಿರುವ ವ್ಯಕ್ತಿ ಸುದೀರ್ ಕುಮಾರ್ ಮಾರೋಳ್ಳಿ, ಶಾಂತಿ ಸೌಹಾರ್ದದ ಕ್ಷೇತ್ರವಾದ ಮಲೆನಾಡಿನಲ್ಲಿ ಕೋಮುವಾದವನ್ನು ತುಚ್ಚವಾಗಿ ಎದುರಿಸಿ, ಜನರಲ್ಲಿ ಧೈರ್ಯದ ಬದುಕು ಕಲ್ಪಿಸಿಕೊಡಲು ಇವರ ಹೋರಾಟ ಭಾಷಣ ಮಾತು
ಮತ್ತು ಕೆಲಸ ಬಹು ದೊಡ್ಡದಿದೆ.
ಇವರ ಕಛೇರಿಯ ಒಳಗೆ ನೂರಾರು ಸಮಸ್ಯೆಗಳನ್ನು ಹೊತ್ತು ಬರುವ ಸಾಕಷ್ಟು ಜನರಿದ್ದಾರೆ. ಕೋರ್ಟು ಕಛೇರಿಗಳು, ಪೋಲೀಸ್ ಸ್ಟೇಷನ್ ಮೆಟ್ಟಿಲೇರಬೇಕಾದ ಸಾಕಷ್ಟು ಪ್ರಕರಣಗಳನ್ನು ಬಗೆಹರಿಸಿ, ಸಮಸ್ಯೆಗಳನ್ನು ನಿವಾರಿಸಿಕೊಡುವ ಒಬ್ಬ ಸಮಾಜ ಸುಧಾರಕ. ಸಮಸ್ಯೆ ಎಂದು ಬರುವ ಯಾರಿಗೂ ಅಲ್ಲಿ ಸಾಂತ್ವನವಿಲ್ಲದೆ ಹೊರಬರುವ ಅವಕಾಶವೇ ತೀರಾ ಕಡಿಮೆ. ಇಲ್ಲಿಂದಲೇ ಸಾಕಷ್ಟು ಜನರ ಬದುಕು ಕಟ್ಟಿದ ಉದಾಹರಣೆಗಳೂ ಇವೆ. ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸಿ ಕೊಡುವ ಸುಧೀರ್ ಕುಮಾರ್ ಮಾರೋಳ್ಳಿ ಕ್ಷೇತ್ರದ ಆದ್ಯಂತ ಚಿರ ಪರಿಚಿತ ನಾಯಕ.
ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯಕರ್ತನಾಗಿ ತನ್ನ ಅತ್ಯಮೂಲ್ಯ ಸೇವೆಯನ್ನು ಪಕ್ಷಕ್ಕೆ ನೀಡುತ್ತಿರುವ ಇವರು ಎಂದಿಗೂ ಅಧಿಕಾರಕ್ಕಾಗಿ ಒತ್ತಾಯಿಸಿದವರಲ್ಲ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಉಡುಪಿ ಕ್ಷೇತ್ರಕ್ಕೆ ಇವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು. ಆ ಮೂಲಕ ತನ್ನ ಸಮಾಜ ಸೇವೆಯನ್ನು ಇನ್ನಷ್ಟು ಚುರುಕು ಗೊಳಿಸಿ, ಕ್ಷೇತ್ರದ ಜನರಿಗೆ ಸಾಂತ್ವನವಾಗಲು ಅವಕಾಶ ಒದಗಿಸಬೇಕು ಎಂದು ಅಭಿಮಾನಿಗಳ ಮತ್ತು ಕ್ಷೇತ್ರದ ಜನರ ಪರವಾಗಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಒತ್ತಾಯಿಸಿದೆ. ಇದು ಕರಾವಳಿ ಮತ್ತು ಮಲೆನಾಡು ಜನಾಗ್ರಹ ಕೂಡ ಹೌದು.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜಯಗಳಿಸಿ ಪ್ರಧಾನಿಯಾಗಿ ಇತಿಹಾಸ ಬರೆದು ಹೋದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇನ್ನೊಂದು ಹೊಸ ಅಧ್ಯಾಯ ಸೃಷ್ಟಿಗೆ, ಕಾಂಗ್ರೆಸ್ ಗೆ ಗತ ವೈಭವವನ್ನು ನೆನಪಿಸುವ ಬಾರಿ ಜಯ ಪಡೆಯಲು ಸುಲಭ ಸಾಧ್ಯ ಎಂಬುದು ಮತದಾರರ ಅಭಿಪ್ರಾಯವಾಗಿದೆ. ಸುಧೀರ್ ಕುಮಾರ್ ಮಾರೋಳ್ಳಿ ಹೆಸರು ಮುಂಚೂಣಿಗೆ ಬರುತ್ತಿದ್ದಂತೆ ಬಿಜೆಪಿಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಗೊಂದಲ ಸೃಷ್ಟಿಸಿಕೊಂಡಾಗಿದೆ. ಬಿಜೆಪಿ ವಲಯದಲ್ಲಿ ಸಹಜವಾಗಿಯೇ ಕರಿ ಛಾಯೆ ಮೂಡಿದೆ.
ಹಾಲಿ ಸಂಸದೆ ಶೋಭ ಕರಂದ್ಲಾಜೆ ಸ್ಪರ್ಧೆಗೆ ಈಗಾಗಲೇ ಹಿಂದೇಟು ಹಾಕಿದ್ದು, ತಾನು ಪ್ರಬಲ ಆಕಾಂಕ್ಷಿ ಎಂದು ಕಾಂಗ್ರೆಸ್ ಜನತಾದಳ, ಆಲ್ಲಿಂದ ಬಿಜೆಪಿ ಬಂದ ಪ್ರಮೋದ್ ಮಧ್ವರಾಜ್, ಬಿಜೆಪಿ ಒಳಜಗಳ, ಒಳ ಒಪ್ಪಂದದ ಮೂಲಕ ಭಾಗಷಃ ತನ್ನ ಅಸ್ತಿತ್ವ ಕಳಕೊಂಡ ರಘಪತಿ ಭಟ್ ಬಹಿರಂಗವಾಗಿ ತಾವೇ ಅಭ್ಯರ್ಥಿತನ ಸ್ವಯಂ ಘೋಷಿಸಿ ಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಿಚ್ಚಳವಾಗಿ ಗೆಲುವು ಸಾಧಿಸುವುದರ ಮೂಲಕ ಬಿಜೆಪಿ ಹುಲಿಗಳ ಸದ್ದಡಗಿಸಿತ್ತು. ಸಿ.ಟಿ. ರವಿ, ಡಿ.ಎನ್. ಜೀವರಾಜ್ ಉಮೇದಾರಿಗೆ ಮನಸ್ಸು ಮಾಡಿದರೂ, ಮತದಾರರು, ರಾಜ್ಯ ಕೇಂದ್ರದ ನಾಯಕರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕರ್ನಾಟಕ ಕಾಂಗ್ರೆಸ್ ನ ಟಾರ್ಗೆಟ್ 22 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಒಂದು ಎನ್ನುವುದು ಇಲ್ಲಿ ಗಮನಾರ್ಹ.