ಡೈಲಿ ವಾರ್ತೆ: 23/Sep/2023

ಕೋಟತಟ್ಟು ಗ್ರಾ. ಪಂ. ವತಿಯಿಂದ
ಪಡುಕರೆಯ ಅರಮ ದೇವಸ್ಥಾನ ಅಂಗನವಾಡಿಗೆ ಕುಡಿಯುವ ನೀರಿನ ಟ್ಯಾಂಕ್ ಹಸ್ತಾಂತರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಸೆ. 23 ರಂದು ಶನಿವಾರ ಕೋಟತಟ್ಟು ಪಡುಕರೆಯ ಅರಮ ದೇವಸ್ಥಾನ ಅಂಗನವಾಡಿಗೆ ಕುಡಿಯುವ ನೀರಿನ ಹೊಸ ಟ್ಯಾಂಕ್ ನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್, ಸದಸ್ಯರಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ಶ್ರೀಮತಿ ಅಶ್ವಿನಿ, ಶ್ರೀಮತಿ ವಿದ್ಯಾ ಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್, ಅಂಗನವಾಡಿ ಶಿಕ್ಷಕಿ ಶ್ರೀಮತಿ ಯಶೋದ _ ಸಹಾಯಕಿ ಶ್ರೀಮತಿ ಅರ್ಚನಾ ಉಪಸ್ಥಿತರಿದ್ದರು.