ಡೈಲಿ ವಾರ್ತೆ: 25/Sep/2023
ಸಮಾಜಕ್ಕೆ ಅಗತ್ಯ ಸಂಸ್ಕಾರ ಮತ್ತು ಸ್ಫೂರ್ತಿದಾಯಕ ಸಂದೇಶ ನೀಡಬೇಕು – ಪ್ರಖ್ಯಾತ ನ್ಯಾಯವಾದಿ ದಿನೇಶ್ ಪಾಟೀಲ್ ಅಭಿಮತ
ಬೆಳಗಾವಿ: ಧರ್ಮದ ಅನುಷ್ಟಾನ ಮತ್ತು ಆಚರಣೆ ತಿಳುವಳಿಕೆಯಿಂದ ಕೂಡಿದ್ದು , ಸಮಾಜಕ್ಕೆ ಅಗತ್ಯ ಸಂಸ್ಕಾರ ಮತ್ತು ಸ್ಫೂರ್ತಿದಾಯಕ ಸಂದೇಶ ನೀಡಬೇಕು… ಪ್ರಖ್ಯಾತ ನ್ಯಾಯವಾದಿ ಶ್ರೀ ದಿನೇಶ್ ಪಾಟೀಲ್ ಅಭಿಮತ.
ದಿನಾಂಕ 24-09-2023 ರಂದು ನಡೆದ ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ & ಉಪನ್ಯಾಸ ಸಂದರ್ಭದಲ್ಲಿ ಬೆಳಗಾವಿಯ ಜನಪ್ರಿಯ ನ್ಯಾಯವಾದಿಗಳಾದ ಶ್ರೀ ದಿನೇಶ್ ಪಾಟೀಲ್ ಮಾತನಾಡುತ್ತಾ, ಧರ್ಮ ಎನ್ನುವ ಪದ ವಿಶಾಲ ಅರ್ಥದಲ್ಲಿ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು, ಯಾವದೇ ಸಂಕುಚಿತ ಮನೋಭಾವ & ಸೀಮಿತ ಆಚರ್ಣೆಗಳಿಗೆ ಒಳಪಟ್ಟದಲ್ಲ. ಅದರಲ್ಲೂ ನಮ್ಮ ಶರಣ ಧರ್ಮ ಸರಳವಾದ, ವೈಚಾರಿಕ ನೆಲೆಗಟ್ಟಿನ ” ದೇಹವೇ ದೇಗುಲ” ಎನ್ನುವ ಪರಿಕಲ್ಪನೆಯ, ಸ್ವ ವಿಮರ್ಶೆಯ ತತ್ವದ ಹಿನ್ನೆಲೆಯಲ್ಲಿ ಸ್ಥಾಪಿಸಲ್ಪಟ್ಟ ದರ್ಮವಾಗಿದ್ದು, ತನ್ನದೇಯಾದ ಆಚರಣೆ & ಸಂಸ್ಕಾರಗಳ ನೆಲೆಗಟ್ಟನ್ನು ಹೊಂದಿದೆ. ಧರ್ಮದ ಸಂಘಟನೆಗೆ ಯುವಜನತೆ ಮುಂದೆ ಬರಬೇಕು. ಹಾಗೆ ಅವರನ್ನು ಸಿದ್ಧಗೊಳಿಸುವ ಕೆಲಸ & ಮಾರ್ಗದರ್ಶನದೊಂದಿಗೆ ಮುನ್ನಡೆಸುವ ಜವಾಬ್ದಾರಿಯನ್ನು ಧಾರ್ಮಿಕ ಸಂಸ್ಥೆಗಳು & ಈಗಿನ ಮಠ ಮಾನ್ಯಗಳು ಮಾಡಬೇಕಾಗಿದೆ. ಭಾರತದ ಸಂವಿಧಾನ ಜಾತ್ಯತೀತ ಸಮಾಜ ನಿರ್ಮಾಣದ ಉದ್ದೇಶ ಹೊಂದಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ 25 ರಿಂದ 28 Article ನ ಅಡಿಯಲ್ಲಿ ದಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ಸಾಕಷ್ಟು ಮುಕ್ತ ಅವಕಾಶ ಪಡೆದಿದ್ದಾನೆ. 20 ನೇ ದಶಕದ ಸ್ಥಾಪಿತವಾದ ಶಿವಯೋಗ ಮಂದಿರದಂತಹ ಸಂಸ್ಥೆಗಳ ಸ್ಥಾಪಿತ ಉದ್ದೇಶ ಪಲಿಸಲು ಒಟ್ಟಾಗಿ ಪ್ರಯತ್ನಗಳಾಗಬೇಕು.. ಧಾರ್ಮಿಕ ಸಂಘಟನೆಗಳು ರಾಜಕೀಯದಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾ ,, ಪ್ರಚಲಿತ ವಿದ್ಯಮಾನಗಳ ಉದಾಹರಣೆಗಳೊಂದಿಗೆ ಎಲ್ಲರ ಮನಮುಟ್ಟುವಂತೆ ಉಪನ್ಯಾಸ ಮಾಡಿದರು.. ಸಂಘಟನೆಯ ಅಧ್ಯಕ್ಷರಾದ ಶ್ರೀ ಈರಣ್ಣ ದೇಯನ್ನವರ ಉಪನ್ಯಾಸದ ಕುರಿತಾಗಿ ಮೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ನ್ಯಾಯವಾದಿಗಳಾಗಿದ್ದ ಶ್ರೀ ವಿ.ಕೆ. ಪಾಟೀಲ ಅವರು ಉಪನ್ಯಾಸಕರ ಕುರಿತಾಗಿ ಪರಿಚಯ ಮಾಡುತ್ತ, ಅವರ ಸಾಮಾಜಿಕ ಸೇವಾ ಕಾರ್ಯಗಳ ಕುರಿತಾಗಿ ಮೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು.ಶರಣರಾದ ಮಲಗೌಡ ಪಾಟೀಲ್ ಅವರಿಂದ ಪ್ರಸಾದ ದಾಸೋಹ ನೆರವೇರಿತು.. ಶರಣೆ ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಪ್ರಾರಂಭದಲ್ಲಿ ಜಯಶ್ರೀ ಚವಲಗಿ, ದೀಪಾ ಪಾಟೀಲ್, ಆನಂದ ಕರ್ಕಿ, ಎ.ಬಿ ಜೇವಣಿಯವರಿ0ದ ವಚನ ಗಾಯನ ನೆರವೇರಿತು. ಸಂಘಟನೆ ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು..ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಶ್ರೀ M.Y. ಮೆಣಸಿನಕಾಯಿ, ವಿ ಬಿ ದೊಡ್ಡಮನಿ ಶಿವಾನoದ ಲಾಳಸoಗಿ ಬಸವರಾಜ ಕರಡಿಮಠ, S.S. ಪೂಜಾರ, ಸುರೇಶ್ ಹಂಜಿ, ಕಮಲಾ ಗಣಾಚಾರಿ,ರೂಪ ಚೌಗಲಾ, ವಿದ್ಯಾ ತಿಗಡಿ, ಮಹಾದೇವ ಘಾಟಿ, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಹೀಗೆ ಸಂಘಟನೆಯ ಕಾರ್ಯಕರ್ತರು & ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು..