ಡೈಲಿ ವಾರ್ತೆ: 26/Sep/2023
ಕೋಟ: ಲಾರಿ ಮಾಲಕ,ಚಾಲಕ ಸಂಘದಿಂದ ಬೃಹತ್ ಪ್ರತಿಭಟನೆ, ಪಾದಯಾತ್ರೆ.!
ಕೋಟ: ಜಿಲ್ಲಾಡಳಿತ ಹಾಗೂ ಉಡುಪಿಯ ನೂತನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ಡಾ. ಅರುಣ್ ಅವರು ಲಾರಿ ಮಾಲಕರು ಕಾನೂನು ಬದ್ಧವಾಗಿ ಮಣ್ಣು ಇನ್ನಿತರ ಸಲಕರಣೆ ಸಾಗಿಸಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಹೇಳಿಕೆಯ ಹಿನ್ನಲ್ಲೆಯಲ್ಲಿ ಕಳೆದೊಂದು ವಾರದಿಂದ ಲಾರಿ ಮಾಲಕರು ತಮ್ಮ ವಾಹನಗಳನ್ನು ರೋಡಿಗಿಳಿಸದೆ ಪ್ರತಿಭಟನೆ ಕಡೆ ಮುಖ ಮಾಡುವಂತ್ತಾಗಿದೆ.
ಸೆ. 26 ರಂದು ಮಂಗಳವಾರ ಬೆಳಿಗ್ಗೆ ಲಾರಿ ಮಾಲಕ, ಚಾಲಕ ಸಂಘ ಕೋಟ ವಲಯದ ವತಿಯಿಂದ ಕೋಟ ಮೂರಕೈ ಬಳಿ ಸಭೆ ಸೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸ್ ಇಲಾಖೆ ವಿರುದ್ಧ ನೂರಾರು ಪ್ರತಿಭಟನಾಕರಾರು ಕಾಲ್ನಾಡಿಗೆಯಿಂದ ಬಂದು ಕೋಟ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲಕರ ಸಂಘದ ಪ್ರಮುಖರಾದ ಭೋಜ ಪೂಜಾರಿ ಯಥಾಸ್ಥಿತಿ ಯಾವುದೇ ಸಮಸ್ಯೆಗಳಿಲ್ಲದೆ ವ್ಯವಹರಿಸಿಕೊಂಡು ಬರುತ್ತಿರುವ ಲಾರಿ ಮಾಲಕ ಹಾಗೂ ಚಾಲಕರಿಗೆ ಸಂಕಷ್ಟವನ್ನು ತಂದಿರಿಸಿದೆ. ಅಲ್ಲದೆ ಇದರಿಂದ ಕೂಲಿಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತ್ತಾಗಿದೆ ಕೆಲಸ ಕಾರ್ಯಗಳಿಲ್ಲದೆ ಕಾರ್ಮಿಕರು ಅಂತತ್ರರಾಗಿದ್ದಾರೆ. ಮತ್ತೊಂದೆಡೆ ಮನೆ ಇನ್ನಿತರ ಕಟ್ಟಡ ಕಟ್ಟುವವರಿಗೂ ಕಲ್ಲು ಮಣ್ಣು ಇನ್ನಿತರ ಕಟ್ಟಡ ಸಾಮಾಗ್ರಿಗಳಿಲ್ಲದೆ ಅಯೋಮಯ ಸ್ಥಿತಿ ಸೃಷ್ಠಿಯಾಗಿದೆ ಕಾನೂನು ಮಾಡಿ ಆದರೆ ಈ ಕರಾವಳಿ ಭಾಗದಲ್ಲಿ ತುಂಡು ಭೂಮಿಗಳೆ ಇರುವುದು ಇಲ್ಲಿ ಮಣ್ಣು ಇನ್ನಿತರ ಕಟ್ಟಡ ಸಾಮಾಗ್ರಿ ಸಾಗಿಸಲು ಕಾನೂನು ಬದ್ಧವಾಗಿ ವ್ಯವಹರಿಸಲು ಸಾಧ್ಯವಿಲ್ಲ ಈ ಕೂಡಲೆ ಪೋಲಿಸ್ ವರಿಷ್ಠಾಧಿಕಾರಿಗಳ ಆದೇಶವನ್ನು ಮರುಪರಿಶೀಲಿಸಬೇಕು ಹಿಂದಿನಂತೆ ಯಥಾಸ್ಥಿತಿ ಸಾಗಣೆಗೆ ಅವಕಾಶ ಕಲ್ಪಿಸಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು. ಅಲ್ಲದೆ
ಪ್ರತಿಭಟನಾಕಾರರು ನಮ್ಮ ಸಮಸ್ಯೆ ಬಗೆಹರಿಯುವ ವರೆಗೂ ಇಲ್ಲಿಂದ ಕದಲುವುದಿಲ್ಲ ಎಸ್ಪಿ ಸಾಹೇಬರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಕೊನೆಗೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ಪ್ರತಿಭಟನಾಕಾರರ ಮನವೊಲಿಸಿ ಮನವಿಯನ್ನು ಸ್ವೀಕರಿಸಿ ಕೊಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ್, ಕೋಟ ಠಾಣಾ ಕ್ರೈಂ ಎಸ್ ಐ ಸುಧಾ ಪ್ರಭು, ಎಎಸ್ಐ ಜಯಪ್ರಕಾಶ್, ಸಿಬ್ಬಂದಿಗಳಾದ ಮೋಹನ್ ಕೊತ್ವಾಲ್, ಪ್ರಸನ್ನ ಹಾಗೂ ಠಾಣೆ ಸಿಬ್ಬಂದಿಗಳು ಹಾಜರಿದ್ದರು.
ಮನವಿಯನ್ನು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಲಾರಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಭೋಜ ಪೂಜಾರಿ ಹಾಗೂ ಹೋರಾಟಗಾರರು ಮಾತನಾಡಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಂದಿರುವಂತಹ ಹೊಸ ನಿಯಮಾವಳಿ ಪ್ರಕಾರ ಲಾರಿ ಚಾಲಕರ ಮತ್ತು ಮಾಲಕರಿಗೆ ಬಹಳ ಸಮಸ್ಯೆವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಲಂಕುಶವಾಗಿ ಪರಿಶೀಲಿಸಿ ವಾಹನ ಚಲಾವಣೆ ಮಾಡುವಲ್ಲಿ ತಂದಿರುವಂತಹ ಅನ್ವಯಗಳು ಮೊದಲು ಇದ್ದ ರೀತಿಯಲ್ಲಿ ಇರುವಂತೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಟಿಪ್ಪರ್, ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಧೀರ್ ಮಲ್ಯಡಿ, ಕೀರ್ತಿಶ್ ಪೂಜಾರಿ ಕೋಟ, ಮಹಾಬಲ ಪೂಜಾರಿ, ಗಣೇಶ್, ರಹಮತ್ ಮಧುವನ, ಜಮಾಲ್ ಮಧುವನ, ಅಚ್ಚುತ್ ಪೂಜಾರಿ ಕಾರ್ಕಡ, ಸಂದೀಪ್ ಕೊಯ್ಕೂರು, ವಿಜಯ್ ಮೊದಲದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.