ಡೈಲಿ ವಾರ್ತೆ:26 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾದಲ್ಲಿ ಪೌರ ಕಾರ್ಮಿಕರ ದಿನಾಚರಣೆ – ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳು: ಎಂ.ಆರ್. ಸ್ವಾಮಿ

ಅಂಕೋಲಾ : ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾ ಣದಲ್ಲಿ ಅವರ ಪಾತ್ರ ಅತ್ಯಮೂಲ್ಯ. ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ಆರ್.ಸ್ವಾಮಿ ಹೇಳಿದರು.

ಪಟ್ಟಣದ ಸಮಾಜ ಮಂದರಿದಲ್ಲಿ ಪುರಸಭೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಅವರು ಮಾತನಾಡಿ, ಪೌರ ಕಾರ್ಮಿಕ ರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ ಮತ್ತು ಭೊಸೇನಾ ಸೈನಿಕರಿದ್ದಂತೆ ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ಮುಖ್ಯ ಅತಿಥಿಗಳಾಗಿ ಮಾತ ನಾಡಿ, ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕ ರು ಆರೋಗ್ಯವವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾಧ್ಯ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷೆ ಮತ್ತು ಹಾಲಿ ಸದಸ್ಯೆ ರೇಖಾ ಡಿ.ಗಾಂವಕರ ಮಾತನಾಡಿ, ಜನರು ಆರೋಗ್ಯ ಚೆನ್ನಾಗಿರಬೇಕಾದರೆ, ಪಟ್ಟಣ ಸ್ವಚ್ಛವಾಗಿರಬೇಕು ಎಂದು ಪರಿಶ್ರಮ ಪಡುವ ಪೌರ ಕಾರ್ಮಿಕರ ಸೇವೆ ಹಾಗೂ ಸಮಾಜದ ಆರೋಗ್ಯ ಕಾಪಾಡಲು ಅವರು ನಿರ್ವಹಿಸುತ್ತುರವ ಸೇವೆ ನಿಜಕ್ಕೂ ಶ್ರೇಷ್ಠ ಎಂದರು. ಸದಸ್ಯರಾದ ಶಾಂತಲಾ ನಾಡಕಣ ್, ಪ್ರಕಾಶ ಗೌಡ, ಮಂಜುನಾಥ ನಾಯ್ಕ, ನಾಗರಾಜ ಐಗಳ, ಅಶೋಕ ಶೆಡಗೇರಿ, ಜಯಾ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಖಾಯಂ ಪೌರಕಾರ್ಮಿಕರಿಗೆ ಸರ್ಕಾರದಿಂದ ತಲಾ 7 ಸಾವಿರ ರೂ. ಪ್ರೋತ್ಸಾಹ ನೀಡುವ ಮೂಲಕ ಒಟ್ಟು 32 ಜನರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಅಭಿ ಯಂತಕಿ ಸೇಲ್ಜಾ ನಾಯ್ಕ, ಸದಸ್ಯರಾದ ಕಾರ್ತಿಕ ನಾಯ್ಕ, ಮಂಗೇಶ ಆಗೇರ, ನಿರ್ಮಲಾ ಹುಲಸ್ವಾರ, ತಾರಾ ನಾಯ್ಕ, ಹೇಮಾ ಆಗೇರ, ಶೀಲಾ ಶೆಟ್ಟಿ, ಕರುಣಾ ಮಹಾಲೆ, ಸುರಕ್ಷಾ ಭೋವಿ ಸೇರಿದಂತೆ ವೇದಿ ಕೆಯಲ್ಲಿ ಉಪಸ್ಥಿತರಿದ್ದರು.
ಪೌರಕಾರ್ಮಿಕ ವಿನೋದ ಹುಲಸ್ವಾರ ಪ್ರಾರ್ಥಿಸಿದರು, ಸಮುದಾಯ ಸಂಘಟನಾಧಿಕಾರಿ ಡಿ.ಎಲ್. ರಾಠೋಡ, ಆರೋಗ್ಯ ನಿರೀಕ್ಷಕ ವಿಷ್ಣು ಗೌಡ, ವ್ಯವಸ್ಥಾಪಕಿ ಸುರೇಖಾ ಪಾರ್ಸಿಕರ ನಿರ್ವಹಿಸಿದರು. ಬೀರಣ್ಣ ನಾಯಕ, ರಮೇಶ ನಾಯ್ಕ, ಮಹೇಶ ಶೇಟ್, ನಮೃತ ಮೊದಲಾದವರು ಸಹಕರಿಸಿದರು. ಬಳಿಕ ಪೌರ ಕಾರ್ಮಿಕರಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಆಡಳಿತಾಧಿಕಾರಿ ಮತ್ತು ಕುಮಟಾ ಎಸಿ ಕಲ್ಯಾಣ ಕಾಂಬಳೆ ಭೇಟಿ ನೀಡಿ, ಪ್ರೋತ್ಸಾಹಿಸಿದರು.