ಡೈಲಿ ವಾರ್ತೆ:29 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾ: ಸರ್ಕಾರಿ ಪ್ರೌಢಶಾಲೆಗೆ ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ತಿಪ್ಪೇಸ್ವಾಮಿ ಭೇಟಿ – ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಶಾಲೆಗಳಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಿ – ತಿಪ್ಪೇಸ್ವಾಮಿ

ಅಂಕೋಲಾ : ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅನೇಕ ಮುಂಜಾಗ್ರತಾ ನಿಯಮಗಳನ್ನು ತರಲಾಗಿದ್ದು, ಮಕ್ಕಳ ರಕ್ಷಣಾ ಕ್ರಮಗಳ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸಹಾಯವಾಣ ಸಂಖ್ಯೆ 1098 ಮತ್ತು 112 ಸಂಖ್ಯೆತನ್ನು ದೊಡ್ಡ ಅಕ್ಷರದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಬರೆಯಬೇಕು ಎಂದು ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಬೇಟಿ ನೀಡಿದ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಇತರೇ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಸರ್ಕಾರದ ನಿರ್ದೇಶನದಂತೆ ಮಕ್ಕಳ ಗ್ರಾಮ ಸಭೆ ನಡೆಸಬೇಕು, ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಬೇಕು. ಕೇವಲ ಕಾಟಾಚಾರಕ್ಕೆ ಸಮಿತಿಗಳನ್ನು ಸಭೆಗಳನ್ನು ರಚಿಸದೆ ಪ್ರತಿಯೊಂದನ್ನು ದಾಖಲೆ ಸಮೇತ ಪುಸ್ತಕದಲ್ಲಿ ಬರೆದಿಡಬೇಕು. ಎಷ್ಟೇ ಎಚ್ಚರಿಕೆ ವಹಿಸಿದರೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಬಳಿ ಕೆಲವು ದಾಖಲಾತಿಗಳನ್ನು ಪರಿಶೀಲಿಸಿ 18 ವರ್ಷದೊಗಳಿಗಿನ ಎಲ್ಲಾ ಮಕ್ಕಳ ರಕ್ಷಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿ ಸಿದರು. ನಂತರ ವಂದಿಗೆ ಗ್ರಾಪಂ.ಗೆ ಭೇಟಿ ನೀಡಿದರು.

ಅಲ್ಲಿಂದ ಹೊಸಗದ್ದೆ ಸರ್ಕಾರಿ ಶಾಲೆಯ ಆವಾರಣದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯ ಮತ್ತು ಸರ್ಕಾರದಿಂದ ಪೂರೈಸಿದ ಆಹಾರ ಕುರಿತು ಪರಿಶೀಲಿಸಿ, ಮಕ್ಕಳು ಕುಳಿತುಕೊಳ್ಳವಲ್ಲಿ ಪ್ಯಾನ್ ವ್ಯವಸ್ಥೆ ಮಾಡಿ ಎಂದರು.

ಶಾಲೆಯ ಆವರಣದಲ್ಲಿ ಇರುವ 2018-19ನೇ ಸಾಲಿನಲ್ಲಿ ಮಂಜೂರಾದ ಶಾಲಾ ಹೊಸ ಕಟ್ಟಡವನ್ನು 2020-21ನೇ ಸಾಲಿನಲ್ಲಿ ನಿರ್ಮಾ ಣಗೊಂಡಿದ್ದು, ಶಾಲೆಗೆ ಹಸ್ತಾಂತರಿಸದ ಕುರಿತು ಮತ್ತು ಅಪೂರ್ಣ ಕಾಮಗಾರಿ ಕುರಿತು ಮಾಹಿತಿಯನ್ನು ಶಾಲಾ ಮುಖ್ಯೋಧ್ಯಾಯಪಕಿಯಿಂದ ಮಾಹಿತಿ ಪಡೆದರು. ಈ ಕುರಿತು ನಾಳೆ ಕಾರವಾರದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿ ಕಾರಿ ಸೋನಂ ಐಗಳ, ತಾಪಂ.ಇಓ ಸುನೀಲ ಎಂ., ಬಿಇಓ ಮಂಗಳಲಕ್ಷ್ಮೀ ಪಾಟೀಲ, ಕ್ಷೇತ್ರ ಸಮನ್ವಯಾ ಧಿಕಾರಿ ಹರ್ಷಿತಾ ನಾಯಕ, ಮುಖ್ಯೋಧ್ಯಾಪಕ ಭಾಸ್ಕರ ಗಾಂವಕರ ಮತ್ತು ವಂದಿಗೆ ಬೊಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಸಿಡಿಪಿಓ ಸವಿತಾ ಶಾಸ್ತ್ರಿಮಠ, ವಂದಿಗೆ ಗ್ರಾಪಂ. ಅಧ್ಯಕ್ಷ ಸತೀಶ ನಾಯಕ, ಸದಸ್ಯ ವಿಘ್ನೇಶ್ವರ ಗೌಡ, ಪಿಡಿಓ ಗಿರೀಶ ನಾಯಕ, ಕಾರ್ಯದರ್ಶಿ ರವಿ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ವಂದನಾ ನಾಯಕ ಇತರರಿದ್ದರು.