ಡೈಲಿ ವಾರ್ತೆ:29 ಸೆಪ್ಟೆಂಬರ್ 2023
– ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.
ಜಪ್ತಿ: ಬೆಳೆ ಸಮೀಕ್ಷೆಗೆ ಹೋದ ಗ್ರಾಮ ಪಂಚಾಯತ್ ವಿ. ಎ. ಹಾಗೂ ಅವರ ಸಹಾಯಕ ಸಿಬ್ಬಂದಿ ಮೇಲೆ ಹಲ್ಲೆ – ಪ್ರಕರಣ ದಾಖಲು!
ಕುಂದಾಪುರ:ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮ ಪಂಚಾಯತ್ ಸನಿಹದಲ್ಲಿ ಮಾರಣಾಂತಿಕ ಹಲ್ಲೆ ಆದ ಘಟನೆ ನಿನ್ನೆ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜಪ್ತಿ ಗ್ರಾಮ ಪಂಚಾಯತ್ ವಿಲೇಜ್ ಅಕೌಂಟೆಂಟ್ ಹಾಗೂ ಅವರ ಸಹಾಯಕರಾಗಿ ಗ್ರಾಮದಲ್ಲಿನ ಬೆಳೆ ಸಮೀಕ್ಷೆ ಮತ್ತು ಸರಕಾರದ ಸುತ್ತೋಲೆಯ ಮಾಹಿತಿಯಂತೆ, ಗ್ರಾಮ ಮಟ್ಟದಲ್ಲಿ ಆದ ಬೆಳೆಗಳ ಸಮೀಕ್ಷೆಯನ್ನು ನಡೆಸಲು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಗ್ರಾಮಗಳಲ್ಲಿನ ಮನೆಗಳಿಗೆ ಸಮೀಕ್ಷೆ ನಡೆಸಲು ತೆರಳಿದ್ದರು. ಅಂತಹ ಸಂದರ್ಭದಲ್ಲಿ ಜಪ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀನಾಥ್ ಉಡುಪ ಅವರ ಮನೆಯ ಬೆಳೆ ಸಮೀಕ್ಷೆಯನ್ನು ಹೋದಂತಹ ಸಂದರ್ಭ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ವಿಲೇಜ್ ಅಕೌಂಟೆಂಟ್ ಆದ ಪ್ರಕಾಶ ಸುವರ್ಣ ಮತ್ತು ಅವರ ಸಹಾಯಕರಾದ ಮಧುರ ಎಂಬವರ ಮೇಲೆ ತಮ್ಮ ಮನೆಯ ಕುರ್ಚಿಯ ಪರಿಕರಗಳನ್ನು ತೆಗೆದು, ತಲೆಗೆ ಮತ್ತು ಮೈ ಭಾಗಕ್ಕೆ ಎಸೆದು ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ ಅದಲ್ಲದೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪ್ರಕರಣ ತನಿಕ ಹಂತದಲ್ಲಿದೆ. ಸಿಬ್ಬಂದಿಗಳಿಗೆ ಮಾರಣಾಂತಿಕ ಹಲ್ಲೆ ನಡೆದಿದ್ದು ತಕ್ಷಣವೇ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಪೊಲೀಸರು ಮಾಹಿತಿಯನ್ನು ಪಡೆದುಕೊಂಡು ಎಫ್ಐಆರ್ ದಾಖಲಿಸಿದ್ದಾರೆ.
ಶ್ರೀನಾಥ್ ಉಡುಪ ವರು 10 ವರ್ಷಗಳ ಹಿಂದೆ ಬಳ್ಕೂರು ನಿಂದ ಜಪ್ತಿಯಲ್ಲಿ ಬಂದು ನೆಲೆಯಾಗಿದ್ದಾರೆ. ಯಾವ ಕಾರಣಕ್ಕಾಗಿ ಅಥವಾ ಯಾವ ಉದ್ದೇಶಕ್ಕಾಗಿ ಪಂಚಾಯತ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಈನ್ನಷ್ಟೇ ತಿಳಿದು ಬರಬೇಕಿದೆ. ಸರ್ಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು ಮತ್ತು ಕರ್ತವ್ಯಕ್ಕೆ ಲೋಪ ತಂದ ಕಾರಣಕ್ಕಾಗಿ ತಕ್ಷಣವೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.