ಡೈಲಿ ವಾರ್ತೆ: 03/OCT/2023
ವರದಿ : ವಿದ್ಯಾಧರ ಮೊರಬಾ
ನರೇಂದ್ರ ಮೋದಿ ದೇಶದ ಚುಕ್ಕಾಣ ಹಿಡಿದ ನಂತರ ಕ್ರಾಂತಿಕಾರಕ ಬದಲಾವಣೆ ಆಗಿವೆ : ಸೂಲಿಬೆಲೆ
ಅಂಕೋಲಾ : ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಲು ಎಂದು ಹಾರೈಸಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಮಂಗಳವಾರ ತಾಲೂಕಿನ ಹಲವೆಡೆ ನಮೋ ಬ್ರಿಗೇಡ್ ವತಿಯಿಂದ ಬೈಕ್ ಮೆರವಣ ಗೆ ನಡೆಸಲಾಯಿತು.
ಬೈಕ್ ಮೆರವಣ ಗೆ ಮೂಲಕ ತಾಲೂಕಿಗೆ ಆಗಮಿಸಿದ ಚಕ್ರವರ್ತಿ ಸೂಲಿಬೆಲೆ ಅವರನ್ನು ನವೋ ಬ್ರಿಗೇಡ್ ಕಾರ್ಯಕರ್ತರು ಹಿಚ್ಕಡ ರಸ್ತೆ ಕ್ರಾಸ್ ಬಳಿ ಸ್ವಾಗತಿಸಿ, ನಂತರ ಬಾಸಗೋಡ ಬಿಜೆಪಿ ಕಾರ್ಯಕರ್ತ ದೇವಾನಂದ ಆಗೇರ ಮನೆಗೆ ತೆರಳಿ ಉಪಹಾರ ಸೇವಿಸಿದರು. ಅಲ್ಲಿಂದ ಮೆರಣ ಗೆ ಮೂಲಕ ಬೆಳಂಬಾರ ದ ಖ್ಯಾತಿ ನಾಟಿ ವೈದ್ಯ ಹನುಮಂತ ಗೌಡ ಅವರ ಮನೆ ಮತ್ತು ಅವರ ಆಸ್ಪತ್ರೆಗೆ ಭೇಟಿ ನೀಡಿ ಪಾಶ್ರ್ವ ವಾಯು ಮತ್ತು ಇತರೆ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಹನುಮಂತ ಗೌಡ ಅವರ ವಿಶೇಷ ಸೇವೆ ಮತ್ತು ಅವರ ಕುಟುಂಬದ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘೀನೆ ವ್ಯಕ್ತಪಡಿಸಿದರು.
ಗೌಡರ ಕುಟುಂಬದವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಿ ಗೌರವಿ ಸಿದರು. ಇದೇ ವೇಳೆ ಸಣ್ಣಮ್ಮಾ ಗೌಡ, ನಾಗೇಂದ್ರ ಗೌಡ, ಶಾರದಾ ಗೌಡ, ಮೀನಾಕ್ಷಿ ಇದ್ದರು.
ಬೆಳಂಬಾರದಲ್ಲಿ ಮುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಚುಕ್ಕಾಣ ಹಿಡಿದ ನಂತರ ಕ್ರಾಂತಿಕಾರಕ ಬದಲಾವಣೆಗಳು ಸಂಭವಿ ಸಿದೆ. ಕೋವಿಡ್ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಮತ್ತು ವಿಜ್ಞಾನಿಗಳಿಗೆ ನೀಡಿದ ಪ್ರೋತ್ಸಾಹ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ದೊರಕಿಸಿ ಕೊಟ್ಟಿತು. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷಗಳಿಂದ ಕಾದಿದ್ದೆವು. ಇಂದಿರಾ ಗಾಂಧಿ, ರಾಜೀವ ಗಾಂಧಿ ಸೇರಿದಂತೆ ಇತರ ಪ್ರಧಾನಿಗಳಿಂದ ಅದು ಸಾಧ್ಯವಾಗಿರಲಿಲ್ಲ. ಅದರ ನಿರ್ಮಾಣಕ್ಕೆ ಮೋದಿಯೇ ಬರಬೇಕಾಯಿತು. ಮಾಜಿ ಪ್ರಧಾನಿ ನೆಹರು ಅವರು ಹಿಂದೂ ದೇವಾಲಯಗಳನ್ನು ವಿರೋಧಿಸುತ್ತಿದ್ದರು. ನರೇಂದ್ರ ಮೋದಿಯವ ರಿಂದಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಡಿಜಿಟಲ್ ವ್ಯವಹಾರ ನಡೆಸುವ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿಣ ರಾಜೇಂದ್ರ ನಾಯ್ಕ, ಬಿಜೆಪಿ ತಾಲೂಕ ಮಂಡ ಳದ ಅಧ್ಯಕ್ಷ ಸಂಜಯ ನಾಯ್ಕ, ನವೋ ಬ್ರಿಗೇಡ್ ತಾಲೂಕಾ ಸಂಚಾಲಕ ಸಂದೀಪ ಗಾಂವಕರ, ಜಿಪಂ. ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಬೆಳಂಬಾರ ಗ್ರಾಪಂ.ಅಧ್ಯಕ್ಷೆ ಜ್ಯೋತಿ ಖಾರ್ವಿ, ಪ್ರಮುಖ ರಾದ ಮಾದೇವ ಬಿ.ಗೌಡ, ವೆಂಕಟೇಶ ಗೌಡ, ಬೇಬಿ ಗೌಡ, ವಿಶ್ವನಾಥ ನಾಯ್ಕ, ಸುಬ್ರಹ್ಮಣ್ಯ ಗಾಂವಕರ, ಸುಂಕಸಾಳ ಗ್ರಾಪಂ.ಉಪಾಧ್ಯಕ್ಷ ಸದಾನಂದ ಎಸ್.ನಾಯಕ, ಮಂಜು ಬಲಿಯಾ ನಾಯ್ಕ, ಕ್ಲಬ್ ವಿ ಫಿಟ್ನೆಸ್ನ ವಿಘ್ನೇಶ್ವರ ನಾಯ್ಕ, ಪ್ರವೀಣ ನಾಯಕ, ಚಂದ್ರಕಾಂತ ನಾಯ್ಕ ಮಂಜಗುಣ , ಗಜೇಂದ್ರ ನಾಯ್ಕ, ವಿನಾಯಕ ನಾಯ್ಕ ತೆಂಕಣಕೇರಿ, ಪ್ರಜ್ವಲ್ ನಾಯ್ಕ ಇತರರಿದ್ದರು.
ಶಿವು ಬೊಮ್ಮು ಗೌಡ ಅವರ ಪ್ರತಿಮೆಯನ್ನು ಚಕ್ರವರ್ತಿ ಸೂಲಿಬೆಲೆ ವೀಕ್ಷಿಸುತ್ತಿರುವ ವೇಳೆ ಇವರು ನಮ್ಮ ಅಜ್ಜನವರಾಗಿದ್ದು, 15.05.1927ರಲ್ಲಿ ಮಹಾತ್ಮಾ ಗಾಂಧಿಜೀಯವರಿಗೆ ಎಡಭಾಗದ ಪಾಶ್ರ್ಚವಾಯು ಮತ್ತು ವಾತದ ತೊಂದರೆಯಾಗಿ ಬೆಂಗಳೂರು ನಂದಿ ಬೆಟ್ಟದ ವಿಶ್ರಾಂತಿ ಧಾಮದಲ್ಲಿ 21 ದಿನಗಳವರೆಗೆ ಡಾ. ಹರಡಿಕರ್ ಸಲಹೆಯಂತೆ ಚಿಕಿತ್ಸೆ ನೀಡಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದರು.