ಡೈಲಿ ವಾರ್ತೆ: 04/OCT/2023

ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಗೆ ಆಯ್ಕೆ

ಬಂಟ್ವಾಳ : ಹಿಂದಿ ಶಿಕ್ಷಕರಿಗೆ ಕೊಡುವ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಿಂದಿ ಭಾಷಾ ಶಿಕ್ಷಕ ರಮಾನಂದ ಆಯ್ಕೆಯಾಗಿದ್ದಾರೆ.

ಹಿಂದಿ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ತಾಲೂಕು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ, ಹಿಂದಿ ಸಂಪನ್ಮೂಲ ಕ್ರೋಡಿಕರಣ ಹಾಗೂ ಪುಸ್ತಕ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡ ರಮಾನಂದ ಅವರು 2021 – 22 ರಲ್ಲಿ
ಸ್ವಸ್ತಿಶ್ರೀ ಪ್ರಶಸ್ತಿ, ಶ್ಯಾಮರಾವ್ ಮೆಮೋರಿಯಲ್ ಉತ್ತಮ ಶಿಕ್ಷಕ ಪ್ರಶಸ್ತಿ, ಗುರು ಶೇಷ್ಠ ರಾಜ್ಯ ಪ್ರಶಸ್ತಿ ಬಂದಿರುತ್ತದೆ.

ವಿಜಯಪುರದಲ್ಲಿ ನಡೆದ ರಾಜ್ಯ ಹಿಂದಿ ಶಿಕ್ಷಕರ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಇಲಾಖಾ ಉನ್ನತ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಸಚಿವರ ಮತ್ತು ಶಾಸಕರ ಗಣ್ಯ ಉಪಸ್ತಿತಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷರ ಸಂಘ ಬೆಂಗಳೂರು ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.