ಡೈಲಿ ವಾರ್ತೆ: 04/OCT/2023

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ಅನ್ಯಾಯ – ಅ.10 ರಿಂದ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ಕಚೇರಿ ಮುಂದೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ

ಬೆಂಗಳೂರು: ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಂದ ನೀಡಲಾಗುತ್ತಿದ್ದ ಕೌಶಲ್ಯ ತರಬೇತಿಗಳನ್ನು ಕಡಿತಗೊಳಿಸಿ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಐ ಹಾಗೂ ಪಾಲಿಟೆಕ್ನಿಕ್, ಬಿಟಿಟಿ ಸಿ, ಮತ್ತು ಇಂಡಸ್ಟ್ರಿಗಳಲ್ಲಿ ತರಬೇತಿ ಕೋರ್ಸ್ ಗಳನ್ನು ನಡೆಸಲು ಅನುದಾನವನ್ನು ಘೋಷಿಸುವ ಮೂಲಕ ಹತ್ತು ವರ್ಷಗಳಿಂದ ಕೌಶಲ್ಯ ತರಬೇತಿ ನೀಡುತ್ತಿರುವವರಿಗೆ ಅನ್ಯಾಯವಾಗಿದ್ದು ಅಕ್ಟೋಬರ್ 10ರಿಂದ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ಕಚೇರಿ ಮುಂದೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದೊಂದಿಗೆ ತರಬೇತುದಾರರೊಂದಿಗೆ ಮೂರು ವರ್ಷ ಒಪ್ಪಂದವಾಗಿದೆ ಅದೇ ರೀತಿ ನಾವು ಕಟ್ಟಡ ಮಾಲೀಕರೊಂದಿಗೆ, ತರಬೇತುದಾರರಿಗೆ ತರಬೇತಿ ಕೊಡಿಸಿ ಒಪ್ಪಂದ ಮಾಡಿಕೊಂಡಿದ್ದೇವೆ. ನಮಗೆ ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಕಾರ್ಯಾದೇಶ ನೀಡದಿರುವುದರ ಮತ್ತು ಸರ್ಕಾರ ನೀಡಿರುವ ಮನದಂಡ ಪಾಲಿಸಿದ್ದರೂ ನಮಗೆ ಕಾರ್ಯಾದೇಶ ನೀಡದಿರುವುದರ ಉದ್ದೇಶವೇನು? ಎಂದು ಕೌಶಲ್ಯ ಕರ್ನಾಟಕ ತರಬೇತಿ ಕೇಂದ್ರಗಳ ಒಕ್ಕೂಟದ ಗೌರಧ್ಯಕ್ಷರಾದ ಹೇಮಾವತಿ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೇಮಾವತಿ ಅವರು ಕಳೆದ ಹತ್ತು ವರ್ಷಗಳಿಂದ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಸೃಷ್ಟಿಸಲು ಶ್ರಮಿಸಿರುವ ತರಬೇತುದಾರರನ್ನು ನಿರ್ಲಕ್ಷಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡಲಾಗಿದೆ ಎಂದರು.

ಕೌಶಲ್ಯಭಿವೃದ್ಧಿ ಪೋರ್ಟಲ್ ನಲ್ಲಿ ತರಬೇತುದಾರರು ಅಪ್ಲೋಡ್ ಮಾಡಿರುವ ಉದ್ಯೋಗ ಸೃಷ್ಟಿ ಮಾಹಿತಿಯನ್ನು ಪಡೆಯಬಹುದು. ಆದರೆ ಸರ್ಕಾರ ಇದನ್ನು ಪರಿಗಣಿಸದೆ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ.

ದಿಢೀರ್ ಎಂದು ಈಗ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ನೀಡುತ್ತಿರುವುದರ ಉದ್ದೇಶ ಏನು ಎಂದು ತಿಳಿದುಬಂದಿಲ್ಲ. ಅಧಿಕಾರಿಗಳು, ನಿರ್ದೇಶಕರು, ಕಾರ್ಯದರ್ಶಿಗಳು ಮತ್ತು ಸಚಿವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಸರ್ಕಾರ ವಿಧಿಸಿದ್ದ ಎಲ್ಲಾ ಮಾನದಂಡಗಳನ್ನು ಅನುಸರಿಸಿದ್ದರೂ, ಉದ್ಯೋಗ ಸೃಷ್ಟಿಸಿದ್ದರೂ ತರಬೇತುದಾರರು ಉದ್ಯೋಗ ಸೃಷ್ಟಿಸಿಲ್ಲ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ತರಬೇತುದಾರರಿಗೆ ಕಾರ್ಯದೇಶ ನೀಡದೆ ತೊಂದರೆ ನೀಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಲಕ್ಷಾಂತರ ರೂಪಾಯಿಗಳನ್ನು ಹೂಡಿ ಮಾನದಂಡ ಅನುಸರಿಸಿ ಕೌಶಲ್ಯ ತರಬೇತಿ ನೀಡಿದ್ದರೂ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಅಹೋರಾತ್ರಿ ಸತ್ಯಾಗ್ರಹ ಮಾಡದೆ ಬೇರೆ ದಾರಿ ಇಲ್ಲ.

ಬಡವರ ಮತ್ತು ಮಹಿಳೆಯರ ಬಗ್ಗೆ ಕಾಳಜಿ ತೋರುವ ಸರ್ಕಾರಕ್ಕೆ ಕೌಶಲ್ಯ ತರಬೇತಿ ನೀಡುತ್ತಿರುವ ತರಬೇತುದಾರರ ಬಗ್ಗೆ ಏಕೆ ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು. ಒಕ್ಕೂಟದ ಅಧ್ಯಕ್ಷರಾದ ಶರಬಸಪ್ಪ ಚಲವಾದಿ, ಸಮಾಜದಲ್ಲಿ ಕಟ್ಟ ಕಡೆಯ ನಿರುದ್ಯೋಗಸ್ಥರಿಗೆ ತಲುಪಬೇಕಾಳ ಕೌಶಲ್ಯ ತರಬೇತಿಗಳನ್ನು ಕಡಿತಗೊಳಿಸಿ ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಐ ಹಾಗೂ ಪಾಲಿಟೆಕ್ನಿಕ್, ಬಿಟಿಟಿ ಸಿ, ಮತ್ತು ಇಂಡಸ್ಟ್ರಿಗಳಲ್ಲಿ ತರಬೇತಿ ಕೋರ್ಸ್ ಗಳನ್ನು ನಡೆಸಲು ಅನುದಾನವನ್ನು ಘೋಷಿಸುವ ಮೂಲಕ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ಸಂಸ್ಥೆಗಳು ಜನರ ಮದ್ಯ ಇದ್ದು ಜನರಿಗೆ ಅವಶ್ಯಕತೆ ಇರುವ ತರಬೇತಿಗಳನ್ನು ನೀಡುತ್ತಾ ಉದ್ಯೋಗ ನಿಯುಕ್ತಿ ಹಾಗೂ ನ್ಯಾಯುದ್ಯೋಗ ಕಲ್ಪಿಸುವ ಮೂಲಕ ಸರ್ಕಾರದ ಯೋಜನೆ ಅವಶ್ಯಕತ ಇರುವ ಫಲಾನುಭವಿಗಳಿಗೆ ತಲುಪಿಸಲ ತಮ್ಮದೇ ಆದ ಸ್ವಂತ ಬಂಡವಾಳವನ್ನು ಬ್ಯಾಂಕ್ ಇತರೆ ಸಾಲ ಸೌಲಭ್ಯ ಪಡೆದು ಒಂದು ಸಾವಿರಕ್ಕೂ ಹೆಚ್ಚು ತರಬೇತಿ ಕೇಂದ್ರಗಳು ಸರಿಸುಮಾರು 20000ಕ್ಕು ಹೆಚ್ಚು ಸಿಬ್ಬಂದಿಯ ಮೂಲಕ ಸಮಾಜ ಸೇವೆಗೆ ಶ್ರಮಿಸುತ್ತಿದ್ದೇವೆ, ಎಂದರು ಒಕ್ಕೂಟದ ನಿರ್ದೇಶಕರಾದ ರಚನಾ ಮಹೇಶ.