ಡೈಲಿ ವಾರ್ತೆ: 09/OCT/2023

ಮನೆ, ಮನ ಮತ್ತು ಶಿಕ್ಷಣ.. ಇವು ಸಮಾಜದ ಸಾಮರಸ್ಯ ಹಾಗೂ ಐಕ್ಯತೆಯ ಸಾದನಗಳಾಗಬೇಕು- ಶರಣ ಶ್ರೀ ಎಮ್. ಎಸ್. ತಿಗಡಿ ಅಭಿಮತ

ಬೆಳಗಾವಿ: ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಅ. 8 ರಂದು ನಡೆದ ವಾರದ ಸಾಮೂಹಿಕ ಪ್ರಾರ್ಥನೆ & ಉಪನ್ಯಾಸ ಸಂದರ್ಭದಲ್ಲಿ ಬೆಳಗಾವಿಯ ನಿವಾಸಿಗಳೇ ಆದ ಶರಣ ಶ್ರೀ ಎಮ್.ಎಸ್. ತಿಗಡಿ ” ಸಾಮಾಜಿಕ ಕಾಳಜಿ” ಎನ್ನುವ ವಿಷಯದ ಕುರಿತಾಗಿ ತಮ್ಮ ಅನುಭಾವ ಹಂಚಿಕೊಂಡರು.. ಬಾಲ್ಯದ ಬದುಕು ಕಳೆದು ಹೋಗುತ್ತ,, ಕೊನೆಗೆ ಬರೀ ನೆನಪಾಗುವ ಬದಲು ಸುಂದರ ಅನುಭವಗಳೊಂದಿಗೆ ಸ್ಮರಣೆಗೆ ತರುವಂತಾಗಬೇಕು. Genaretion gap ಗೆ ತಕ್ಕಂತೆ, ಅದುನಿಕತೆಗೆ ಪ್ರಬಾವಿತರಾಗುತ್ತ ಮನಸ್ಸುಗಳನ್ನು ಕಟ್ಟುವ ಕಟ್ಟೆಗಳ ಬದಲು ಎತ್ತರದ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಪ್ರಚಲಿತ ಶಿಕ್ಷಣದ ಗುರಿ ಹೆಚ್ಚು ಅಂಕಗಳ ಜೊತೆಗೆ ಹೆಚ್ಚು ಆದಾಯ ತರುವತ್ತ ಕೆಂದ್ರೀತವಾಗುತ್ತಿದೆ.. ಮೌಲ್ಯಗಳ ಬೆಳವಣಿಗೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುತ್ತಾ , ಸಮಾಜದ ಪ್ರಗತಿಗೆ ಮನೆಗಳೇ ಮನಸನ್ನು ಕಟ್ಟುವ ಕೇಂದ್ರಗಳಾಗಬೇಕು. ಗ್ರಾಮೀಣ ಬದುಕಿನ ಜೊತೆ ಜೊತೆಗೆ ಪ್ರಚಲಿತ ವಿದ್ಯಮಾನಗಳ ಉದಾಹರಣೆಗಳೊಂದಿಗೆ ಮತ್ತು ತಮ್ಮದೇ ಆದ ಸ್ವರಚಿತ ಲೇಖನ & ಕವಿತೆಗಳ ಮೂಲಕ ಸುದೀರ್ಘವಾಗಿ ಶರಣರಾದ ಶ್ರೀ Tigadi ಅವರು ತಮ್ಮ ಅನುಭವ ಪ್ರಸ್ತುತ ಪಡಿಸಿದರು.

ಇತ್ತೀಚಿಗೆ ಲಿಂಗಾಯತ ಸಂಘಟನೆಯ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ “ಡಾನ್ಸ್ ಬೆಳಗಾವಿ ” ಕಾರ್ಯಕ್ರಮದ ರೂವಾರಿಗಳಾಗಿದ್ದ ಸತೀಶ ಪಾಟೀಲ್ ವೇದಿಕೆಯಲಿ ಉಪಸ್ಥಿತರಿದ್ದರು. ಮತ್ತು ಆ ಕಾರ್ಯಕ್ರಮದ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದ ಶರಣೆ ಪ್ರೀಯಾ, ತೀರ್ಪುಗಾರರಾಗಿದ್ದ ವಿಜಯ್ & ನಾಗೇಶ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಸಂಘಟನೆಯ ಅಧ್ಯಕ್ಷರಾದ ಶ್ರೀ ಈರಣ್ಣ ದೇಯನ್ನವರ ಉಪನ್ಯಾಸದ ಕುರಿತಾಗಿ ಮೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಶ್ರೀ M.Y. ಮೆಣಸಿನಕಾಯಿ ಶ್ರೀ ಎಮ್.ವೈ.ಮೆಣಸಿನಕಾಯಿ ಅವರು ಉಪನ್ಯಾಸಕರ ಕುರಿತಾಗಿ ಪರಿಚಯ ಮಾಡುತ್ತ, ಅವರ ಸಾಮಾಜಿಕ ಒಡನಾಟ, ಸಾಹಿತ್ಯ ಸೇವೆ, ಹಲವಾರು ಸಂಘಸಂಸ್ಥೆಗಳ ಮೂಲಕ ಪರಿಸರದ ಜಾಗೃತಿ ಮೂಡಿಸುವ ಕಾರ್ಯಗಳ ಕುರಿತಾಗಿ ಮೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು.

ಶರಣರಾದ ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ ದಂಪತಿಗಳಿಂದ ಪ್ರಸಾದ ದಾಸೋಹ ನೆರವೇರಿತು.. ಶರಣೆ ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಪ್ರಾರಂಭದಲ್ಲಿ ಜಯಶ್ರೀ ಚವಲಗಿ, ಆನಂದ ಕರ್ಕಿ, ಕಮ್ಮಾರ ಶರಣರು ಎ.ಬಿ ಜೇವಣಿಯವರಿ0ದ ವಚನ ಗಾಯನ ನೆರವೇರಿತು. ಸಂಘಟನೆ ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು..ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ, ಕೂರಿಷೆಟ್ಟಿ ಗುರುಗಳು, ಶೇಡಬಾಳ ಶರಣರು, ಕುಂಬಾರ Sir,ಮಾರದ ಗುರುಗಳು, S.S. ಪೂಜಾರ, ಶಂಕರ ಗುಡಸ, ಗುರವ ದಂಪತಿಗಳು, ಆಕ್ಕಾಮಹದೇವಿ ತೆಗ್ಗಿ ,ಬಸವರಾಜ ಬಿಜ್ಜರಗಿ, ಹೀಗೆ ಸಂಘಟನೆಯ ಕಾರ್ಯಕರ್ತರು & ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು..