


ಡೈಲಿ ವಾರ್ತೆ: 13/OCT/2023


ಕಲಬುರಗಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಬರ್ಬರ ಕೊಲೆ
ಕಲಬುರಗಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಬರ್ಬರ ಕೊಲೆ ಮಾಡಿದ ಘಟನೆ ಅಫಜಲಪುರ ತಾಲೂಕಿನ ಚೌಡಾಪುರದಲ್ಲಿ ಶುಕ್ರವಾರ ಜರುಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಡಪ್ಪ ಗೌಡ ಪಾಟೀಲ್ (50) ಕೊಲೆಯಾದವರು.
ಚೌಡಾಪುರದ ಬಸ್ ನಿಲ್ದಾಣದ ಅವರಣದಲ್ಲಿಯೇ ಮಾರಕಾಸ್ತ್ರದೊಂದಿಗೆ ಗೌಡಪ್ಪ ಗೌಡ ಅವರನ್ನು ಕೊಲೆ ಮಾಡಲಾಗಿದೆ. ಹಳೆಯ ವೈಶಾಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.