ಡೈಲಿ ವಾರ್ತೆ: 13/OCT/2023
ಶಿವಮೊಗ್ಗ: ಮೆಗ್ಗಾನ್ ಜಿಲ್ಲಾಸ್ಪತ್ರೆ ಸಿಬ್ಬಂದಿಗಳಿಂದ ಯಡವಟ್ಟು: ಮಗು ಅದಲು ಬದಲು, ಹೆತ್ತವರು ಕಂಗಾಗಲು!
ಶಿವಮೊಗ್ಗ: ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಿರುತ್ತವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಮಗು ಅದಲು ಬದಲು ಆಗಿದೆ ಎನ್ನುವ ಗೊಂದಲ ಶುರುವಾಗಿದೆ.
ಶಿಕಾರಿಪುರದ ಸಬೀನ್ ಬಾನು ಎಂಬುವವರು (ಅ.12) ಬೆಳಗ್ಗೆ ಹೆರಿಗೆ ಆಗಿದೆ. ತಾಯಿ ಮತ್ತು ತಂದೆ ಕುಟುಂಬಸ್ಥರಿಗೆ ನಿಮಗೆ ಗಂಡು ಮಗು ಆಗಿದೆ ಎಂದಿದ್ದಾರೆ. ಈ ಸುದ್ದಿಯಿಂದ ಸಬೀನಾ ಮತ್ತು ಪತಿ ಕುಟುಂಬಸ್ಥರು ಸಂತಸಗೊಂಡಿದ್ದರು. ಮಗು ಹುಟ್ಟಿದ ಒಂದು ಗಂಟೆಯಲ್ಲಿ ಗಂಡು ಮಗು ನಿಮ್ಮದಲ್ಲ, ನಿಮಗೆ ಹೆಣ್ಣು ಮಗು ಆಗಿದೆ ಎಂದು ಗಂಡು ಮಗುವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಹೌದು, ನವಜಾತ ಶಿಶುವಿಗೆ ಕೈಗೆ ಹಾಕಿದ ಟ್ಯಾಗ್ನಿಂದ ಈ ಯಡವಟ್ಟು ಸಂಭವಿಸಿದೆ.
ಮಗು ಹುಟ್ಟಿದ ತಕ್ಷಣ ಯಾವ ಮಗು ಮತ್ತು ತಾಯಿಯ ಹೆಸರು ಟ್ಯಾಗ್ ಮೇಲೆ ಬರೆಯುತ್ತಾರೆ. ಹೀಗೆ ಸಬೀನಾಗೆ ಗಂಡು ಮಗು ಆಗಿದೆ ಎನ್ನುವ ಟ್ಯಾಗ ಕೈಮೇಲೆ ಇತ್ತು. ತಮಗೆ ಗಂಡು ಮಗುವಾಗಿದೆ ಎಂದು ಸಬೀನಾ ಕುಟುಂಬಸ್ಥರು ಖುಷಿ ಪಡುತ್ತಿದ್ದರು. ಆದ್ರೆ, ಕೇವಲ ಒಂದೇ ಗಂಟೆಯಲ್ಲಿ ಗಂಡು ಮಗು ಸಬೀನಾದಲ್ಲ ಅದು ಕಾವ್ಯ ಎನ್ನುವ ತಾಯಿಯದ್ದು ಎನ್ನುವುದು ಗೊತ್ತಾಗಿದೆ. ಸಬೀನಾಗೆ ಹೆಣ್ಣು ಮಗು ಆಗಿದೆ. ಆ ಹೆಣ್ಣು ಮಗುವನ್ನು ಸಬೀನಾಗೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ಮುಂದಾಗಿದ್ದರು. ಇದಕ್ಕೆ ಸಬೀನಾ ಪತಿ ಮತ್ತು ಕುಟುಂಬಸ್ಥರು ವಿರೋಧ ಮಾಡಿದ್ದಾರೆ. ತನ್ನ ಪತ್ನಿಗೆ ಗಂಡು ಆಗಿದೆ. ಮಗುವಿನ ಕೈಮೇಲೆ ಟ್ಯಾಗ್ ಕೂಡಾ ಆಸ್ಪತ್ರೆಯವರೇ ಹಾಕಿದ್ದಾರೆ. ಈಗ ಹೆಣ್ಣು ಮಗು ಎಂದು ಸುಳ್ಳು ಹೇಳುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಈ ಸುದ್ದಿಯು ತಿಳಿಯುತ್ತಿದ್ದಂತೆ ಹೆರಿಗೆ ವಾರ್ಡ್ ಮುಂದೆ ಜನರು ಸೇರಿಕೊಂಡಿದ್ದು, ಮೆಗ್ಗಾನ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ಶುರುಮಾಡಿದರು. ನಮ್ಮ ಮಗು ಯಾವುದು ಎನ್ನುವುದನ್ನು ವೈದ್ಯರೇ ತೀರ್ಮಾನ ಮಾಡಲಿ. ಮೊದಲು ಗಂಡು ಮಗು ಎಂದು ಹೇಳಿ, ಈಗ ಹೆಣ್ಣು ಮಗು ಎಂದು ಹೇಳುತ್ತಿರುವುದು ಸರಿಯಿಲ್ಲ. ಹೆರಿಗೆ ವಾರ್ಡ್ನಲ್ಲಿ ಸಿಬ್ಬಂದಿಗಳು ತಪ್ಪಿನಿಂದ ಗಂಡು ಮತ್ತು ಹೆಣ್ಣು ಮಗು ಎನ್ನುವ ಗೊಂದಲ ಸೃಷ್ಟಿ ಮಾಡಿದ್ದಾರೆಂದು ಸಬೀನಾ ಪತಿ ಮತ್ತು ಅವರ ತಾಯಿ ನೇರವಾಗಿ ಆರೋಪ ಮಾಡಿದ್ದಾರೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಹುಟ್ಟಿದ ನವಜಾತ ಶಿಶುವಿನ ಕೈಗೆ ಟ್ಯಾಗ್ ತಪ್ಪಾಗಿ ಹಾಕಿದ್ದರಿಂದ ಈ ಗಂಡು ಮತ್ತು ಹೆಣ್ಣು ಮಗುವಿನ ಗೊಂದಲ ಶುರುವಾಗಿತ್ತು. ಕಾವ್ಯ ಎನ್ನುವ ಮಹಿಳೆಗೆ ಗಂಡು ಮಗು ಆಗಿದೆ. ಆ ಮಗುವಿನ ಕೈಗೆ ಕಾವ್ಯ ತಾಯಿಯ ಹೆಸರು ಬರೆಯುವ ಬದಲಿಗೆ ಸಬೀನಾ ಎಂದು ಬರೆದಿದ್ದಾರೆ. ಅದರ ಬಳಿಕ ಮಗುವಿನ ತಂದೆ ಮತ್ತು ಸಂಬಂಧಿಗಳಿಗೆ ಗಂಡು ಮಗುವನ್ನು ತೋರಿಸಿದ್ದಾರೆ. ಸ್ವಲ್ಪ ಹೊತ್ತು ಆದ ಬಳಿಕ ಕಾವ್ಯಗೆ ಹೆಣ್ಣು ಮಗುವನ್ನು ಕೊಡಲು ಹೋಗಿದ್ದಾರೆ. ಕಾವ್ಯ ತನಗೆ ಗಂಡು ಆಗಿತ್ತು. ಹೆಣ್ಣು ಮಗು ಯಾಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಗಲಿಬಿಲಿಯಾದ ಸಿಬ್ಬಂದಿಗಳು ಗಂಡು ಮಗು ಹುಡುಕಾಡಿದ್ಧಾರೆ. ಅದು ಆಗಲೇ ಸಬೀನಾ ಕುಟುಂಬಸ್ಥರ ಕೈ ಸೇರಿತ್ತು.
ತಮಗೆ ಆಗಿರುವ ಮಗುವಿನ ಸತ್ಯ ಬಾಯ್ಬಿಟ್ಟ ತಾಯಿಂದಿರು
ಸಬೀನಾ ಕುಟುಂಬಸ್ಥರಿಂದ ಮಗುವನ್ನು ಸಿಬ್ಬಂದಿಗಳು ವಾಪಸ್ ಪಡೆದಿದ್ಧಾರೆ. ಬಳಿಕ ಆಸ್ಪತ್ರೆಯ ಹೊರಗೆ ಸಬೀನಾ ಕುಟುಂಬಸ್ತರು ಆಕ್ರೋಶ ಹೊರಹಾಕಿದ್ದರು. ಈ ಗಲಾಟೆಯ ಬಳಿಕ ಎಚ್ಚೆತ್ತ ಮೆಗ್ಗಾನ್ ಜಿಲ್ಲಾಶ್ಪತ್ರೆಯ ಅಧಿಕಾರಿಗಳು. ಹೆರಿಗೆ ಆದ ಬಳಿಕ ಇಬ್ಬರು ಬಾಣಂತಿಯರಿಗೆ ಅವರಿಗೆ ಆಗಿರುವ ಮಗುವನ್ನು ತೋರಿಸಿದ್ದಾರೆ. ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗು ಎನ್ನುವ ಮಾಹಿತಿ ನೀಡಿದ್ದರು. ಹೆರಿಗೆ ಆದ ಬಳಿಕ ಅಸ್ವಸ್ಥಗೊಂಡಿರುವ ಬಾಣಂತಿಯರು ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ ಈ ಮಗುವಿನ ಅದಲು ಬದಲು ಪ್ರಕರಣ ನಡೆದು ಹೋಗಿದೆ. ಸಬೀನಾ ಪೋಷಕರು ಗಂಡು ಮಗು ಎಂದು ಪಟ್ಟು ಹಿಡಿದಿದ್ದರು. ಅಸ್ಪತ್ರೆಯ ವೈದ್ಯರು ಡಿಎನ್ಎ ಟೇಸ್ಟ್ ಗೆ ಮುಂದಾಗಿದ್ದರು. 15 ದಿನ ವರದಿ ಬಂದ ಬಳಿಕ ನಿಮಗೆ ಮಗುವನ್ನು ಕೊಡುವುದಾಗಿ ಹೇಳಿದ್ದರು. ಬಳಿಕ ಇಬ್ಬರು ತಾಯಂದಿರಿಗೆ ವಾಸ್ತವ ಸಂಗತಿ ತಿಳಿಸಿದ್ದಾರೆ. ಇಬ್ಬರು ಬಾಣಂತಿಯರು ತಮಗೆ ಆಗಿರುವ ಮಗುವನ್ನು ಈಗ ಸ್ವೀಕರಿಸಿದ್ದಾರಂತೆ. ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗುವನ್ನು ವೈದ್ಯರು ನೀಡಿದ್ದಾರೆ. ಕೊನೆಗೂ ತಾಯಿಂದಿರು ತಮಗೆ ಆಗಿರುವ ಮಗುವಿನ ಸತ್ಯ ಹೇಳಿದ್ದರಿಂದ ವಿವಾದಕ್ಕೆ ತೆರೆ ಬಿದ್ದಿದೆ.