



ಡೈಲಿ ವಾರ್ತೆ: 29/OCT/2023




ದಕ್ಷಿಣ ಕನ್ನಡ:ಸಿಡಿಲಿನ ಬಡಿತಕ್ಕೆ ಬೆಂಕಿಗಾಹುತಿಯಾದ ತೆಂಗಿನ ಮರ!
ಬಂಟ್ವಾಳ : ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ಆದಿತ್ಯವಾರ ಸಂಜೆ ವೇಳೆ ಮಾಣಿ ಸಮೀಪದ ಬುಡೋಳಿ ಜಂಕ್ಷನ್ ನಲ್ಲಿ ನಡೆದಿದೆ.
ಬುಡೋಳಿಯ ಫಾತಿಮಾ ಸ್ಟೋರ್ ಮಾಲಕ ಸಿದ್ದೀಕ್ ಅವರ ಮನೆಯಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮವಾಗಿ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಲ್ಲದೆ, ಮರ ಸುಟ್ಟು ಹೋಗಿದೆ.
ಮನೆಯಂಗಳದಲ್ಲೇ ತೆಂಗಿನ ಮರವಿದ್ದು, ಇದರ ಪಕ್ಕದಲ್ಲೇ ಇವರಿಗೆ ಸೇರಿದ ಅಂಗಡಿ ಕೂಡ ಇದೆಯಾದರೂ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

