ಡೈಲಿ ವಾರ್ತೆ: 30/OCT/2023

ಕುಮಟಾ – ಶ್ರೀ ಕಾಳಿಕಾ ಭವಾನಿ ದೇವಾಲಯದಲ್ಲಿ ಭಕ್ತಾಭಿಮಾನಿಗಳ ಸಭೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶ್ರೀ ಕಾಳಿಕಾ ಭವಾನಿ ದೇವಾಲಯದಲ್ಲಿ ಇಂದು ದೇವಳ ಆಡಳಿತ ಸಮಿತಿ ಮತ್ತು ಸಾರ್ವಜನಿಕ ಭಕ್ತಾಭಿಮಾನಿಗಳ ಸಭೆ ನಡೆಸಿ, ಉತ್ಸವಗಳು ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಇತ್ತೀಚಿಗೆ ಮುಕ್ತಾಯಗೊಂಡ ನವರಾತ್ರಿ ಉತ್ಸವಗಳು ಹಾಗೂ ಕಳೆದೆರಡು ವರ್ಷಗಳಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ನಡೆಸಿದ ಖರ್ಚುವೆಚ್ಚಗಳ ಬಗ್ಗೆ ಸಂಬಂಧಿಸಿದವರು ಸಭೆಗೆ ವಿವರ ನೀಡಿದರು.

ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀ ಮಾರುತಿ ಹರಿದಾಸ ಶೇಟ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ಅಧಿಕಾರಾವಾಧಿಯ ಎರಡು ವರ್ಷಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಹೇಳಿ, ಸಹಕರಿಸಿದ ಸಮಸ್ತರಿಗೂ ಕೃತಜ್ಞತೆಗಳನ್ನು ತಿಳಿಸಿ, ತಾವಿನ್ನು ಅಧಿಕಾರ ತೊರೆಯುವುದಾಗಿ ಘೋಷಿಸಿದರು.

ನೆರೆದ ಸಾರ್ವಜನಿಕ ಭಕ್ತಾಭಿಮಾನಿಗಳು, ಶೇಟರ ಈ ನಿರ್ಧಾರವನ್ನು ಒಪ್ಪಿಕೊಳ್ಳಲಿಲ್ಲ. ಅವರ ಅಧಿಕಾರಾವಧಿಯಲ್ಲಿ ದೇವಾಲಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿದ್ದು, ಇನ್ನೂ ಎರಡು ವರ್ಷಗಳ ವರೆಗೂ ಪ್ರಸ್ತುತ ಆಡಳಿತ ಸಮಿತಿಯನ್ನೇ ಮುಂದುವರೆಸಲು ನಿರ್ಧರಿಸಿರುವುದಾಗಿ ಹೇಳಿದರು. ಅದರಂತೆ,
ಅಧ್ಯಕ್ಷರಾಗಿ ಶ್ರೀ ಮಾರುತಿ ಹರಿದಾಸ ಶೇಟ್, ಉಪಾಧ್ಯಕ್ಷರಾಗಿ ಶ್ರೀ ಸತೀಶ ಕಾಶೀನಾಥ ಸಾನು, ಕಾರ್ಯದರ್ಶಿಯಾಗಿ ಶ್ರೀ ರಾಜೇಶ ಸೀತಾರಾಮ ಶೇಟ್, ಖಜಾಂಚಿಯಾಗಿ ಶ್ರೀ ಮಂಜುನಾಥ ಶಾಂತಾರಾಮ ದಿವಾಕರ ಇವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ದೇವಾಲಯದ ಅರ್ಚಕರಾಗಿ ಶ್ರೀ ಪ್ರಶಾಂತ ಪ್ರಸಾದ್ ಶೇಟ್ ಯಲ್ಲಾಪುರ ಇವರನ್ನು ನೇಮಕ ಮಾಡಿಕೊಳ್ಳಲಾಯಿತು.