ಡೈಲಿ ವಾರ್ತೆ: 12/NOV/2023

ಕೆ .ಸಂತೋಷ ಶೆಟ್ಟಿ ಮೊಳಹಳ್ಳಿ, ಕುಂದಾಪುರ .(ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)m: 9632581508



ಬದುಕಿನ ಅಂಧಕಾರವನ್ನ ತೊರೆದು…, ದೀಪಗಳ ಬೆಳಕಿನ ಪ್ರಜ್ವಲತೆ ಬೆರೆತು….!” ಪ್ರತಿ ದೀಪದ ಬೆಳಕಿನ ಕಿರಣಗಳಲ್ಲೂ ಪ್ರಜ್ವಲತೆಯ ಪ್ರಕಾಶತೆಯನ್ನ ಪಡೆಯುವ ಆಚರಣೆಯ ಸಂಕೇತವೇ ದೀಪಾವಳಿ ಸಂಭ್ರಮ….!” ದೀಪ ಹಚ್ಚುವ ದೀವಿಗೆಯ ಸಂಭ್ರಮದ ಆಚರಣೆ….!” ಕತ್ತಲನ್ನು ಹೋಗಲಾಡಿಸಿ, ದೀಪ ಹಚ್ಚುವ ಭಾವೈಕ್ಯತೆಯ ಹಬ್ಬ….!” ದೀಪದಿಂದ – ದೀಪವನ್ನ ಹಚ್ಚೋಣ, ಬೆಳಗೋಣ….!”

ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಲೇಖನ:
ದೀಪದಿಂದ ದೀಪವ ಹಚ್ಚಬೇಕು ಮಾನವ…!” ಎನ್ನುವ ನಿಟ್ಟಿನಲ್ಲಿ ದೀಪಗಳ ಆಚರಣೆ ಮತ್ತು ದೀಪಗಳಿಗಿರುವಂತಹ ಶಕ್ತಿ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದಂತಹ ಗುಣಗಳನ್ನು ಹೊಂದಿದೆ. ಅದೇ ರೀತಿ ಹತ್ತಾರು ದೀಪಗಳು ಸೇರಿ ಹಣತೆಗಳ ಸಾಲುವಾಗುವ ಹಾಗೆ, ಹತ್ತಾರು ನೂರಾರು ದೀಪಗಳು ದೀಪಾವಳಿ ಹಬ್ಬದಂದು ವಿಜೃಂಭಿಸಿ ನಗುತ್ತದೆ. ದಾಸ ಶ್ರೇಷ್ಠರ ಗೀತೆಯಂತೆ ದೀಪದಿಂದ ದೀಪವ ಹಚ್ಚಬೇಕು ಮಾನವ ಎನ್ನುವ ಧಾರ್ಮಿಕ ಸಂಸ್ಕೃತಿ ಇಂದಿನ ಜನಮಾನಸದಲ್ಲಿ ಈ ನೆಲದಲ್ಲಿ ಉಳಿದು ಹೋಗಿದೆ. ದೀಪಗಳ ಆರಾಧನೆಯನ್ನ ವಿಶೇಷವಾಗಿ ಪೂಜಿಸಲ್ಪಡುವಂತಹ ದೀಪಾವಳಿ ಪ್ರಪಂಚದ ಅದೆಷ್ಟೋ, ಜನರಿಗೆ ದೀಪವನ್ನು ಬೆಳಗಿದಂತಹ ಸಂತಸವಾದರೆ, ಇನ್ನೂ ಕೆಲವು ಜನರಿಗೆ ಕೆಲವು ದೀಪಾವಳಿ ನರಕ ಸದೃಶವಾಗಿ ಬಿಡುತ್ತದೆ. ಆದರೆ ದೀಪಗಳ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿಯೂ ಶ್ರೇಯಸ್ಸು ನೀಡುವುದರೊಂದಿಗೆ ಪ್ರತಿಯೊಂದು ದೀಪವು ಅಂಧಕಾರನ ಸುಟ್ಟು ಹಾಕಿ ಮಮಕಾರವನ್ನ ಪ್ರಪಂಚಕ್ಕೆ ತಂದು ಕೊಡುವಲ್ಲಿ ಪ್ರೇರೇಪಿಸುತ್ತದೆ. ಅದೇ ರೀತಿ ಕತ್ತಲನ್ನ ಕವಿದು
ದೀಪ ಹಚ್ಚುವ ಹಬ್ಬ. ಇದನ್ನು ವಿಕ್ರಮಕ್ಕೆ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ.
ದೀಪಗಳ ಆರಾಧನೆಯು ಕೂಡ ತನ್ನ ಶಕ್ತಿಯನ್ನು ವಿಶೇಷವಾಗಿ ತೋರಿಸಲ್ಪಡುತ್ತದೆ. ದೀಪಾವಳಿ ಎಂದ ತಕ್ಷಣ ಕೃಷಿ ಭೂಮಿಗಳನ್ನ ವಿಶೇಷವಾಗಿ ದೀಪಗಳಿಂದ ಅಲಂಕೃತಗೊಂಡು, ಬಲಿಂದ್ರನನ್ನ ಕರೆಯುವಂತಹ ವಿಶೇಷ ಪೂಜೆ ವಾಗಿ, ಗ್ರಾಮೀಣ ಭಾಗದಲ್ಲಿ ಆಚರಿಸುತ್ತಾರೆ. ಬದುಕು ಬರಹದೊಂದಿಗೆ ಭವಿಷ್ಯವನ್ನು ಕಟ್ಟಿ, ಭೂಮಿಗೆ ದೀಪಗಳನ್ನು ಹಚ್ಚಿ, ವರ್ಷಕ್ಕೊಮ್ಮೆ ನಮಸ್ಕರಿಸಿ ಬಲಿಂದ್ರ ರಾಯನನ್ನು ಕೂಗಿ , ಸಕಲ ದಿವ್ಯತ್ಮವು ಕೂಡ ಪ್ರಜ್ವಲಿಸಲಿ ಎನ್ನುವುದೇ ಈ ದೀಪಾವಳಿಯ ಸಂಕೇತವಾಗಿ ಮಾರ್ಪಾಡಾಗುತ್ತದೆ.

ದೀಪಾವಳಿಯೂ ಪ್ರಪಂಚದ ಶ್ರೇಷ್ಠತೆಯ ಬದುಕನ್ನ ಸಾರುವುದರೊಂದಿಗೆ ದೀಪಾವಳಿ ಬದುಕಿಗೆ ಶಾಂತಿ ಮತ್ತು ಕ್ರಾಂತಿಯನ್ನು ನೀಡುತ್ತದೆ ಬಲಿಂದ್ರ ಪೂಜೆಯನ್ನ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ನಡೆಸುವುದರೊಂದಿಗೆ ದೀಪಗಳ ಆರಾಧನೆ ಅದೇ ರೀತಿ ಪ್ರಜ್ವಲಿಸುತ್ತದೆ ಅಂಧಕಾರವನ್ನ ಸುಟ್ಟುಹಾಕಿ ಬದುಕಿಗೆ ಮಮಕಾರವನ್ನು ನೀಡುವ ಶಕ್ತಿಯಾಗಿ ಬೆಳಗುತ್ತದೆ.

ದೀಪಾವಳಿ ಹಬ್ಬದ ಆಚರಣೆ:
ವಿಕ್ರಮ ಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣ ರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.

ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. ಹೀಗಾಗಿ ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರಕೃತಿಯಲ್ಲಿ ನಾವು ಲಕ್ಷ್ಮಿ ದೇವಿಯನ್ನು ಕಾಣುತ್ತೇವೆ. ನಾವು ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.