ಡೈಲಿ ವಾರ್ತೆ: 15/ಆಗಸ್ಟ್/ 2025

ಕೋಟದ ಪಂಚವರ್ಣ ಸಂಘಟನೆಯಿಂದ 79ನೇ ಸ್ವಾತಂತ್ರ್ಯೋತ್ಸವ : ಯುವ ಜನತೆ ಸೇನೆಯ ಮೂಲಕ ದೇಶ ಸೇವೆಗೆ ಮುನ್ನುಡಿ ಬರೆಯಬೇಕು- ಚಂದ್ರಶೇಖರ ನಾಯರಿ

ಕೋಟ: ದೇಶ ಸೇವೆಗೆ ಹಲವು ದಾರಿಗಳಿರಬಹುದು ಆದರೆ ಸೇನೆಗೆ ಸೇರಿಕೊಳ್ಳುವ ಮೂಲಕ ಯುವ ಜನತೆ ದೇಶದ ಭದ್ರತೆಗೆ ಮುನ್ನುಡಿ ಬರಯಬೇಕು ಎಂದು ವಾಯುಸೇನೆಯ ನಿವೃತ್ತ ಅಧಿಕಾರಿ ಗುಂಡ್ಮಿ ಚಂದ್ರಶೇಖರ ನಾಯರಿ ಕರೆ ನೀಡಿದರು.

79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಂಚವರ್ಣ ಯುವಕ ಮಂಡಲ (ರಿ) ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಕೋಟ ಇವರ ನೇತೃತ್ವದಲ್ಲಿ
ವಾಯು ಸೇನಾಪಡೆಯ ನಿವೃತ್ತ ಅಧಿಕಾರಿ ಗುಂಡ್ಮಿ ಚಂದ್ರಶೇಖರ ನಾಯರಿ ಧ್ವಜಾರೋಹಣ ನೆರವೆರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಭಾರತ ಜನತೆ ನಿರಾಳವಾಗಿ ಜೀವನ ಸಾಗಿಸಲು ಸೇನೆ ಪಾತ್ರ ಗಣನೀಯವಾದದ್ದು ಈ ದೇಶದಲ್ಲಿ ಸೇನೆ ಬಲ ಅದರ ಕಾರ್ಯವೈಕರಿಯನ್ನು ಬಿಚ್ಚಿಟ್ಟರು.

ದೇಶದ ಯುವ ಸಮೂಹ ಸೈನ್ಯದಲ್ಲಿ ಕಾರ್ಯನಿರ್ವಹಿಸಲು ಪೋಷಕರ ಸಹಕಾರವನ್ನು ಒತ್ತಿ ಹೇಳಿದರಲ್ಲ ಪಂಚವರ್ಣ ಸಂಘಟನೆಯ ಸಾಮಾಜಿಕ ಕಾರ್ಯಗಳು ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದರು.
ಇದೇ ವೇಳೆ ಚಂದ್ರಶೇಖರ್ ಇವರನ್ನು ಗೌರವಿಸಲಾಯಿತು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ ಕೃಷ್ಣ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪರಿಸರವಾದಿ ಕೋ.ಗಿ.ನಾ,ಉದ್ಯಮಿ ರಮೇಶ್ ಪ್ರಭು,ಸಂಘದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣ ಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಸ್ವಾಗತಿಸಿದರು.ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.